ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

Public TV
2 Min Read
Chaitra Kundapur 2

ಚಿಕ್ಕಮಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಟಕೆಟ್‌ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ (Chaithra Kundapura) ಅಂಡ್‌ ಟೀಂ 5 ಕೋಟಿ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ (Fraud Case) ಇದೀಗ ಟ್ವಿಸ್ಟ್‌ ಸಿಕ್ಕಿದೆ. ತನಿಖೆ ನಡೆದಷ್ಟು ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ.

chaithra Kundapura govinda babu

ಚೈತ್ರಾ ಕುಂದಾಪುರ ವಂಚನೆ ಪ್ರಕರಣ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಡೂರಿನ ಸಲೂನ್ ಮಾಲೀಕ ರಾಮುಗೆ ಗಗನ್‌ ಮತ್ತು ಅವರ ಗುಂಪಿನಿಂದ ಬೆದರಿಕೆ ಕರೆ ಬಂದಿದೆ. ಸಲೂನ್‌ ಮಾಲೀಕ ಧನರಾಜ್ ಕಾಂಗ್ರೆಸ್ ಮುಖಂಡ ಎಂಬ ಸಂಗತಿಯೂ ಹೊರಬಂದಿದೆ. ಗೋವಿಂದಬಾಬು ಬಳಿ ತೆರಳುವ ಮುನ್ನ 5ನೇ ಆರೋಪಿ ಚನ್ನ ನಾಯ್ಕ್‌ಗೆ ಥೇಟ್ ಆರ್‌ಎಸ್‌ಎಸ್‌ ಮುಖಂಡನಂತೆ ಕೂದಲು ಶೈನಿಂಗ್ ಮಾಡಿ ಹೇರ್ ಕಟ್ ಮಾಡಿಸಿಕೊಂಡು ಹೋದ ಬಳಿಕ ಪ್ರಕರಣ ಹೊರ ಬರುತ್ತಿದ್ದಂತೆ ಸಲೂನ್ ಮಾಲೀಕ ರಾಮುಗೆ ಬೆದರಿಕೆ ಕರೆ ಬಂದಿದೆ. ಇದನ್ನೂ ಓದಿ: ಡೀಲ್‍ನಲ್ಲಿ ‘ವಿಶ್ವನಾಥ್‌ ಜೀʼ ಪಾತ್ರಧಾರಿ ಚನ್ನನಾಯ್ಕ್ ತನ್ನ ಪಾತ್ರದ ಬಗ್ಗೆ ವಿವರಿಸಿದ್ದು ಹೀಗೆ..

ಮಾಧ್ಯಮಗಳ ಮುಂದೆ ತನಗೆ ತಿಳಿದ ಮಾಹಿತಿ ನೀಡಿದ್ದಕ್ಕೆ ಧನರಾಜ್ ಆಪ್ತ ನೂತನ್ ಸಲೂನ್ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಹ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ʻನಿನ್ಯಾಕೆ ಮಾಧ್ಯಮ ಮುಂದೆ ಮಾತಾನಾಡಿದೆ, ನನಗೆ ಗೊತ್ತಿಲ್ಲ ಅಂತಾ ಹೇಳಬೇಕಿತ್ತು. ಅಂಗಡಿ ಹೇಗೆ ನಡೆಸುತ್ತೀಯಾ ನೋಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

ಇನ್ನು ಚೈತ್ರಾ ಕುಂದಾಪುರಗೆ 2018ರಿಂದಲೇ ಕಡೂರಿನ ಲಿಂಕ್ ಇತ್ತು ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. 2018ರಲ್ಲಿ ಚೈತ್ರಾ ಕಡೂರು ಪಟ್ಟಣದ ಸರ್ಕಾರಿ ಕಾಲೇಜು ಒಂದರಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆ ವೇಳೆ ಅಂದಿನ ಬಿಜೆಪಿಯಲ್ಲಿದ್ದ ಆರೋಪಿ ಗಗನ್ ಹಾಗೂ ಧನರಾಜ್ ಆಕೆ ಬೆನ್ನಿಗೆ ನಿಂತಿದ್ದರು. ಅಂದಿನಿಂದ ಕಡೂರಿನ ಗಗನ್ ಹಾಗೂ ಧನರಾಜ್ ಜೊತೆ ಚೈತ್ರಾಳ ಸ್ನೇಹ ಉತ್ತಮವಾಗಿತ್ತು ಎಂದು ಹೇಳಲಾಗಿದೆ.

Web Stories

Share This Article