ಟಾಲಿವುಡ್ ನಟಿ ಸಮಂತಾ (Samantha) ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಖುಷಿ’ ಸಿನಿಮಾ ಭರ್ಜರಿ ಕಲೆಕ್ಷನ್ ಕೂಡ ಮಾಡ್ತಿದೆ. ಹೀಗಿರುವಾಗ ಸ್ಯಾಮ್ ರಾಜಕೀಯಕ್ಕೆ (Politics) ಎಂಟ್ರಿ ಕೊಡುವತ್ತ ಗಮನ ವಹಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಬಿಸಿ ಬಿಸಿ ಚರ್ಚೆ ಶುರುವಾಗುತ್ತಿದೆ.
ಅನಾರೋಗ್ಯದ ಹಿನ್ನಲೆ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ಸಮಂತಾ ಈಗ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುವ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಚಿಕಿತ್ಸೆಯ ಜೊತೆಗೆ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸಮಂತಾ ಯೋಚಿಸಿದ್ದಾರಂತೆ. ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ನಾಯಕರು ಸಮಂತಾರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್
ತಮ್ಮ ಪಕ್ಷದ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ, ತಮ್ಮ ಪಕ್ಷದ ಬೆಂಬಲಕ್ಕೆ ನಿಲ್ಲಿ ಎಂದು ನಟಿಗೆ ಕೋರಿದ್ದಾರೆ. ಮುಂದಿನ ಎಲೆಕ್ಷನ್‍ಗೆ ಸಮಂತಾ ಕೂಡ ಬಿಆರ್‍ಎಸ್ ಪಕ್ಷದ ಪರವಾಗಿ ಪ್ರಚಾರದ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ. ತೆಲಂಗಾಣದಲ್ಲೂ ಸ್ಯಾಮ್‍ಗೆ ಫ್ಯಾನ್ ಬೇಸ್ ದೊಡ್ಡ ಮಟ್ಟದಲ್ಲಿರುವ ಕಾರಣ ರಾಜಕೀಯ ಪಾರ್ಟಿಗೆ ಪ್ಲಸ್ ಆಗುತ್ತೆ ಎಂಬುದು ಹಲವರ ಲೆಕ್ಕಚಾರ.
ಅಷ್ಟಕ್ಕೂ ಇದೆಲ್ಲಾ ಇನ್‍ಸೈಡ್ ನ್ಯೂಸ್. ಆದರೆ ಸಮಂತಾ (Samantha) ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಪ್‍ಡೇಟ್ ಸಿಗುವವೆರೆಗೂ ಕಾಯಬೇಕಿದೆ.
ನಟಿ ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]