ಯಾದಗಿರಿ: ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದ ಕುದುರೆಯನ್ನು ಯುವಕ ರಕ್ಷಿಸಿದ ಘಟನೆ ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ.
ಅಗತೀರ್ಥ ಗ್ರಾಮದ ಯುವಕ ಮೌನೇಶ ಕುದುರೆ ರಕ್ಷಿಸಿದ (Horse Rescue) ಸಾಹಸಿ ಯುವಕ ಎಂದು ಹೇಳಲಾಗಿದೆ. ಯುವಕ ಮೌನೇಶ್ ಕುದುರೆ ಕಾಲುವೆಗೆ ಬಿದ್ದಿದ್ದನ್ನು ಗಮನಿಸಿದ ಕೂಡಲೇ ಪ್ರಾಣದ ಹಂಗು ತೊರೆದು ಕಾಲುವೆಗಿಳಿದಿದ್ದಾನೆ. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿ ಹೋಗ್ತಿದ್ದ ಕುದುರೆಯನ್ನ ಸುರಕ್ಷಿತವಾಗಿ ದಡ ಸೇರಿಸಿದ್ದಾನೆ. ಇದನ್ನೂ ಓದಿ: ಯಾವ್ದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ನಾನ್ ರೆಡಿ – ಬಿಜೆಪಿಗೆ ಎಂ.ಕೆ ಸ್ಟಾಲಿನ್ ಪುತ್ರ ಸವಾಲ್
ಅಗ್ನಿ ಗ್ರಾಮದ ಹೊರವಲಯದ ನಾರಾಯಣಪುರ ಡ್ಯಾಂ ಎಡದಂಡೆ ಕಾಲುವೆಗೆ ಕುದುರೆ ಬಿದ್ದಿತ್ತು. ಪ್ರಾಣದ ಹಂಗು ತೊರೆದು ಕುದುರೆ ರಕ್ಷಣೆ ಮಾಡಿದ ಯುವಕನ ಕಾರ್ಯಕ್ಕೆ ಗ್ರಾಮಸ್ಥರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]