ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ- ಜೋಡೆತ್ತು ಜೊತೆ ಡಿ ಬಾಸ್ ಪೋಸ್ಟ್ ವೈರಲ್

Public TV
1 Min Read
darshan 3

ಸ್ಯಾಂಡಲ್‌ವುಡ್ ಡಿ ಬಾಸ್ ದರ್ಶನ್- ಕಿಚ್ಚ ಸುದೀಪ್ (Kichcha Sudeep) ಒಂದಾಗುವ ಸುದ್ದಿ ಬೆನ್ನಲ್ಲೇ ದಚ್ಚು ಜೋಡೆತ್ತುಗಳ ಜೊತೆಯಿರುವ ಪೋಸ್ಟ್ ಶೇರ್ ಮಾಡಿ, ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದಾರೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎನ್ನುವ ಪೋಸ್ಟ್ ಮೂಲಕ ಸಂಧಾನದ ಬಗ್ಗೆ ಸುಳಿವು ನೀಡಿದ್ರಾ? ಎಂದು ಫ್ಯಾನ್ಸ್ ಲೆಕ್ಕಚಾರ ಹಾಕ್ತಿದ್ದಾರೆ.

SUDEEP 2

ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್- ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇಬ್ಬರನ್ನು ಸುಮಲತಾ ಸಂಧಾನ ಮಾಡಿಸಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ ದರ್ಶನ್ ನಯಾ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕಾಲಾಯ ತಸ್ಮಯ್ ನಮಃ ಎನ್ನುವ ಸಂಸ್ಕೃತ ಸಾಲಿನ ಅರ್ಥ ಏನು ಎಂದು ಹುಡುಕುತ್ತಿದ್ದಾರೆ. ಆ ಸಾಲಿಗೆ ಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆ ಎನ್ನುವ ಅರ್ಥವಿದೆ.

ಜೋಡೆತ್ತುಗಳ ದರ್ಶನ್ (Darshan) ನಿಂತಿರುವ ಪೋಸ್ಟ್ ವೈರಲ್ ಆಗ್ತಿದ್ದಂತೆ, ಈ ಜೋಡೆತ್ತುಗಳನ್ನ ದರ್ಶನ್- ಸುದೀಪ್ ಹೋಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಜೋಡೆತ್ತುಗಳ ಹಾಗೆ ಮತ್ತೆ ಜೊತೆಯಾಗಿ ಎಂದು ವಿಶ್‌ ಮಾಡ್ತಿದ್ದಾರೆ. ಇದನ್ನೂ ಓದಿ:ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

ನಟಿ ಸುಮಲತಾ ಮಾತನಾಡಿ, ಇದು ನಮ್ಮ ವೈಯಕ್ತಿಕ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇ. ಇದು ತೀರಾ ಪರ್ಸನಲ್ ವಿಚಾರ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ ಎಂದಿದ್ದಾರೆ. ಒಟ್ನಲ್ಲಿ ಇಬ್ಬರೂ ಆದಷ್ಟು ಬೇಗ ಕೈ ಜೋಡಿಸುತ್ತಾರೆ ಅಂತಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಪೋಸ್ಟ್ ಕುತೂಹಲ ಮೂಡಿಸಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article