ಸ್ಯಾಂಡಲ್ ವುಡ್ ಹೆಸರಾಂತ ನಟ ನೀನಾಸಂ ಸತೀಶ್ (Satish Ninasam), ಜಗತ್ತಿನ ಅತೀ ಉದ್ದವಾದ ಜಿಪ್ ಲೈನ್ (Zip line) ನಲ್ಲಿ ಸಾಹಸ ಪ್ರದರ್ಶನ ಮಾಡುವ ಮೂಲಕ ಹೊಸ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಜಿಪ್ ಲೈನ್ ನಲ್ಲಿ ಅವರು ಚಲಿಸಿದ್ದು ಆ ಅನುಭವ ಮರೆಯಲಾರದ್ದು ಎಂದಿದ್ದಾರೆ.
ಜಗತ್ತಿನ ಅತೀ ಉದ್ದವಾದ ಜಿಪ್ ಲೈನ್ ಇರುವುದು ಯುಎಇನಲ್ಲಿ (UAE). ಕೇಬಲ್ ಮಾರ್ಗವು 2.8 ಕಿಮೀ ಉದ್ದವಾಗಿದೆ. ಇದು ಸಮುದ್ರ ಮಟ್ಟದಿಂದ 1680 ಮೀಟರ್ ಎತ್ತರದಲ್ಲಿದೆ. ಜಿಪ್ ಲೈನ್ 28 ಫುಟ್ ಬಾಲ್ ಪಿಚ್ ಗಳಿಗಿಂತ ಉದ್ದವಾಗಿ ಮತ್ತು ದುಬೈನ ಅತೀ ಎತ್ತರದ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾಕ್ಕಿಂತ ಮೂರು ಹೆಚ್ಚು ಹೆಚ್ಚು ಉದ್ದವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್
ಈ ಜಿಪ್ ಲೈನ್ ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಲ್ಲದೇ, ಯುಎಇನ ಅತೀ ಎತ್ತರದ ಪರ್ವತವಾದ ಜೆಬೆಲ್ ಜೈಸ್ ಪರ್ವತದಲ್ಲಿ ಇದನ್ನು ಅಳವಡಿಸಲಾಗಿದೆ. ಅಲ್ಲದೇ ದಿನಕ್ಕೆ 250 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಇಂಥದ್ದೊಂದು ರೋಚಕ ಅನುಭವವನ್ನು ನೀನಾಸಂ ಸತೀಶ್ ಪಡೆದುಕೊಂಡಿದ್ದಾರೆ.
ಆಗಾಗ್ಗೆ ಸತೀಶ್ ಇಂತಹ ಸಾಹಸವನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅತೀ ಉದ್ದದ ಜಿಪ್ ಲೈನ್ ಗೆ ತೆರಳಿ ಅಲ್ಲಿ ಒಂದಷ್ಟು ಸಮಯವನ್ನು ಕಳೆದಿದ್ದಾರೆ. ಆ ಅನುಭವವನ್ನು ವಿಡಿಯೋದಲ್ಲಿ ದಾಖಲಿಸಿದ್ದಾರೆ. ಆ ವಿಡಿಯೋವನ್ನು ತಮ್ಮ ಸತೀಶ್ ಆಡಿಯೋ ಹೌಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
Web Stories