ಭಾವಿ ಪತ್ನಿ ಹರ್ಷಿಕಾಗೆ ಭುವನ್ ಭರ್ಜರಿ ಗಿಫ್ಟ್ : ಗೃಹ ಪ್ರವೇಶದಲ್ಲಿ ಹರ್ಷಿಕಾ ಭಾಗಿ

Public TV
2 Min Read
Harshika Poonachcha

ಟಿ ಹರ್ಷಿಕಾ (Harshika Poonachcha) ಮತ್ತು ನಟ ಭುವನ್ (Bhuvan) ನಾಳೆ ಕೊಡಗಿನಲ್ಲಿ (Kodagu) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೂ ಮುನ್ನ ಭಾವಿ ಪತ್ನಿ ಹರ್ಷಿಕಾಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ ಭುವನ್. ಹರ್ಷಿಕಾಗಾಗಿಯೇ ಭುವನ್ ತೋಟದ ಮನೆ ಕಟ್ಟಿಸಿದ್ದು, ಮದುವೆ ಮುನ್ನವೇ ಹೊಸ ಮನೆ ಗೃಹ ಪ್ರವೇಶ ಮಾಡಿದ ಭುವನ್-ಹರ್ಷಿಕಾ ಜೋಡಿ. ಸಂಪ್ರದಾಯದಂತೆ ದೀಪ ಹಿಡಿದು ಹರ್ಷಿಕಾ ಹೊಸ ಮನೆಗೆ ಎಂಟ್ರಿಕೊಟ್ಟಿದ್ದರೆ, ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ ಭುವನ್.

harshika 1

ಕೇವಲ ಮನೆ ಮಾತ್ರವಲ್ಲ, ವಾರದ ಹಿಂದೆಯಷ್ಟೇ ಅವರು ಮತ್ತೊಂದು ಉಡುಗೊರೆಯನ್ನು ಹರ್ಷಿಕಾಗೆ ನೀಡಿದ್ದರು. ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿತ್ತು ಈ ಜೋಡಿ. ಹರ್ಷಿಕಾ ಈ ಚಿತ್ರಕ್ಕೆ ನಿರ್ಮಾಪಕಿಯಾದರೆ, ಭುವನ್ ಹೀರೋ.

Bhuvan Harshika 1

ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್ ಗೆ ‘ಭುವನಂ ಎಂಟಟೈನ್ ಮೆಂಟ್’ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ (Movie) ‘ಭುವನಂ ಶ್ರೇಷ್ಠಮ್  ಗಚ್ಚಾಮಿ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

harshika

ಇದೊಂದು ಬಾಕ್ಸರ್ ನ ಕಥೆಯಾಗಿದ್ದು ಆರು ವರ್ಷದ ಹಿಂದೆಯೇ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್​ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್​ ಇರಲಿದೆ. ಈ ಚಿತ್ರದಲ್ಲಿ  ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ  ಕೆಲಸ ಮಾಡುತ್ತಿದ್ದಾರೆ.

 

ಸದ್ಯ ಮದುವೆಯ (Marriage) ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ ಚಿತ್ರದಲ್ಲಿ ಭುವನ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ‌ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article