ರಾಜ್ಯದಲ್ಲಿ ಎನ್‌ಇಪಿ ರದ್ದು; ರಾಜ್ಯ ಶಿಕ್ಷಣ ನೀತಿ ಜಾರಿ ಮಾಡ್ತೀವಿ: ಡಿಕೆಶಿ

Public TV
2 Min Read
d.k.shivakumar 1

ಬೆಂಗಳೂರು: ರಾಜ್ಯದಲ್ಲಿ ಎನ್‌ಇಪಿ (NEP) ರದ್ದು ಮಾಡುತ್ತಿದ್ದೇವೆ. ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ಹೇಳಿದರು.

ಎನ್‌ಇಪಿ ರದ್ದು ಕುರಿತ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಶಿಕ್ಷಣ ಇಲಾಖೆ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ. ಎನ್‌ಇಪಿ ಸಾಧಕ-ಬಾಧಕದ ಬಗ್ಗೆ ಚರ್ಚೆ ಆಗಿದೆ. ನಮ್ಮ ಶಿಕ್ಷಣ ರಾಷ್ಟ್ರದಲ್ಲಿ ಉತ್ತಮವಾಗಿದೆ. ಅನೇಕ ಸಮಸ್ಯೆಗಳನ್ನ ಕುಲಪತಿಗಳು ಹೇಳಿದ್ದಾರೆ. ಕೇಂದ್ರದಿಂದ ಶಿಕ್ಷಣ ಇಲಾಖೆಗೆ ನಮಗೆ ಕಡಿಮೆ ಹಣ ಬರುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆಪರೇಷನ್‌ ಹಸ್ತ ಭೀತಿ; ವಲಸಿಗರ ಜೊತೆ ಸಮಾಲೋಚನೆ ನಡೆಸಲು ಬಿಎಸ್‌ವೈಗೆ ತಾಕೀತು

siddaramaiah meeting

ನಮ್ಮ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಎನ್‌ಇಪಿಯನ್ನ ತರಾತುರಿಯಲ್ಲಿ ಕರ್ನಾಟಕದಲ್ಲಿ ಜಾರಿ ಮಾಡಲಾಯ್ತು. ಯುಪಿ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಬಜೆಪಿ ಆಡಳಿತ ರಾಜ್ಯದಲ್ಲಿ ಎನ್‌ಇಪಿ ಇಲ್ಲ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭ ಮಾಡಬೇಕಿತ್ತು. ಆದರೆ ಆತುರವಾಗಿ ಜಾರಿ ಮಾಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ಕಾಲದಲ್ಲಿ ಇದ್ದ ಎಜುಕೇಷನ್ ಪಾಲಿಸಿ ಒಂದು ಇದೆ. ತಜ್ಞರ ಒಳಗೊಂಡು ಮಾಡಿದ ಒಂದು ರಿಪೋರ್ಟ್ ಇದೆ. ಎನ್‌ಇಪಿಯಲ್ಲಿ ನಮಗೆ ಅನೇಕ ವಿಚಾರದಲ್ಲಿ ಒಪ್ಪಿಗೆ ಇಲ್ಲ. ತಂತ್ರಜ್ಞಾನಕ್ಕೆ ತಕ್ಕಂತೆ ಎಜುಕೇಷನ್ ಇರಬೇಕು. ಇದಕ್ಕೆ ತಕ್ಕಂತೆ ಪಾಲಿಸಿ ರೂಪಿಸುತ್ತೇವೆ ಎಂದರು.

ನಮ್ಮ ರಾಜ್ಯದಲ್ಲಿ ಎನ್‌ಇಪಿ ರದ್ದು ಮಾಡುತ್ತಿದ್ದೇವೆ. ಹೊಸ ಪಾಲಿಸಿ ರಚನೆಗೆ ಸಮಿತಿ ರಚನೆ ಮಾಡಲಾಗಿದೆ. ಎನ್‌ಇಪಿ ಇಲ್ಲ. ನಾಗಪುರ ಯೂನಿವರ್ಸಿಟಿ ಪಾಲಿಸಿ ಇರೋದಿಲ್ಲ. ಒಂದು ವಾರದಲ್ಲಿ ಸಮಿತಿ ರಚನೆ ಮಾಡ್ತೀವಿ. ಆದಷ್ಟು ಬೇಗ ಸಮಿತಿ ವರದಿ ತೆಗೆದುಕೊಂಡು ಹೊಸ ಶಿಕ್ಷಣ ನೀತಿ ಜಾರಿ ಮಾಡ್ತೀವಿ. ಎಸ್‌ಇಪಿ ಜಾರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ: ಪರಮೇಶ್ವರ್

ಎನ್‌ಇಪಿ ರದ್ದು ಕುರಿತು ಸಿಎಂ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಲಾಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಿತು. ರಾಜ್ಯದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article