ಮೊನ್ನೆಯಷ್ಟೇ ‘ಖುಷಿ’ (Kushi) ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijaya Devarakonda) ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದರು. ಈಗ ಸಮಂತಾ (Samantha) ಏಕಾಏಕಿ ವಿಮಾನ ಏರಿದ್ದಾರೆ. ಮೂರು ನಾಲ್ಕು ತಿಂಗಳು ಸ್ಯಾಮ್ ಭಾರತದಿಂದ ನಾಪತ್ತೆ. ಆರೋಗ್ಯಕ್ಕಾಗಿ ಮತ್ತೆ ಚಿಕಿತ್ಸೆಗೆ ಅಮೆರಿಕಾಗೆ ಹಾರಿದ್ರಾ ಸಮಂತಾ? ಇಲ್ಲಿದೆ ಮಾಹಿತಿ.

ಒಂದು ವರ್ಷ ಯಾವುದೇ ಸಿನಿಮಾ ಮಾಡಲ್ಲ ಎಂದು ಘೋಷಿಸಿದ್ದು ಗೊತ್ತು. ಅದಾದ ಮೇಲೆ ಯೋಗ, ಧ್ಯಾನದ ಮೊರೆ ಹೋದರು. ಕೆಲ ದಿನಗಳ ಹಿಂದೆ ಬಾಲಿ ದ್ವೀಪದಲ್ಲಿ ಬೀಡು ಬಿಟ್ಟಿದ್ದರು. ಇನ್ಯಾವಾಗ ಸಮಂತಾ ದರ್ಶನ ಅಂತಾ ಕಾಯುವ ಸಮಯದಲ್ಲಿ ಖುಷಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದರು. ಈಗ ಸಿನಿಮಾ ಬಿಡುಗಡೆ ಮುನ್ನವೇ ಮತ್ತೆ ಫ್ಲೈಟ್ ಹತ್ತಿದ್ದಾರೆ. ಅವರು ನೇರವಾಗಿ ಅಮೆರಿಕಾಗೆ (America) ಪ್ರಯಾಣ ಬೆಳೆಸಿದ್ದಾರೆ. ಇನ್ನು ಮೂರು ನಾಲ್ಕು ತಿಂಗಳು ನಾಟ್ ರೀಚೇಬಲ್ ಆಗಿರುತ್ತಾರಂತೆ.
ಮಯೋಸಿಟೀಸ್ ಚಿಕಿತ್ಸೆಗಾಗಿಯೇ ಅಮೆರಿಕಾಗೆ ಹೋಗಿದ್ದು ಸತ್ಯ. ಮೂರು ನಾಲ್ಕು ತಿಂಗಳು ಅಲ್ಲೇ ಇರಲಿದ್ದಾರಾ ಅಥವಾ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರಾ? ಸದ್ಯಕ್ಕೆ ಅದರ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಒಟ್ನಲ್ಲಿ ಸಮಂತಾ ಸಂಕಟ ನೋಡಿ ಅಭಿಮಾನಿಗಳು ಕೂಡ ಬೇಸರ ಹೊರಹಾಕಿದ್ದಾರೆ. ಸ್ಯಾಮ್‌ಗೆ ಏನಾಗ್ತಿದೆ ಅಂತಾ ತಲೆ ಕೆಡಿಸಿಕೊಂಡಿದ್ದಾರೆ. ಅದೇನೇ ಇರಲಿ ಸಮಂತಾ ಗುಣಮುಖರಾಗಿ ಬರಲಿ ಎಂಬುದೇ ಅಭಿಮಾನಿಗಳ ಆಶಯ.


