ಬೆಂಗಳೂರು: ನಾನು ಕಾಂಗ್ರೆಸ್‍ಗೆ (Congress) ಹೋಗಲ್ಲ. ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ನಾನು ಬಿಜೆಪಿಯಲ್ಲಿಯೇ (BJP) ಇದ್ದೇನೆ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekhar) ಹೇಳಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಟಿಎಸ್, ನಾನು ಮಾನಸಿಕವಾಗ, ದೈಹಿಕವಾಗಿ ಬಿಜೆಪಿಯಲ್ಲಿ ಇದ್ದೀನಿ. ಮೊನ್ನೆ ನಡೆದ ಬೆಂಬಲಿಗರ ಸಭೆಯಲ್ಲಿ ನೆಲಮಂಗಲ ಶಾಸಕರು ಇರಲಿಲ್ಲ. ಅವರು ನಮ್ಮ ಕ್ಷೇತ್ರದ ಮತದಾರ. ಅವರನ್ನು ಸಭೆಯಲ್ಲಿ ಕೂರಿಸಿರಲಿಲ್ಲ ಎಂದರು. ಇದನ್ನೂ ಓದಿ: ನೀವೇನಾದರೂ ಆಪರೇಷನ್ ಅಂತ ಕೈ ಹಾಕಿದ್ರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೀವಿ: ಸಿ.ಟಿ. ರವಿ
ಆಪರೇಷನ್ ಹಸ್ತದ ಭೀತಿಯಿಂದ ಬಿಜೆಪಿ ಅಲರ್ಟ್ ಆಗಿದ್ದು, ಬಿಜೆಪಿ ಕಚೇರಿಯಲ್ಲಿ ನಾಯಕರ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ನಾಯಕರು ಸೋಮಶೇಖರ್ ಕರೆಸಿಕೊಂಡು ಸಮಸ್ಯೆ ಆಲಿಸಿದರು. ಅಲ್ಲದೆ ಸಮಸ್ಯೆ ಬಗೆಹರಿಸೋಣ ಅಂತ ಭರವಸೆ ಕೂಡ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]