ಈಶ್ವರ್ ಖಂಡ್ರೆ ಕಾಲಿಗೆ ಶರಣು- ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ ಸಲಗರ್?

Public TV
1 Min Read
BIDAR SHARANU SALAGAR

ಬೀದರ್: ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ (BJP MLA Sharanu Salagar) ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಹೌದು. ನೂತನ ಅನುಭವ ಮಂಟಪದ ಕಾಮಗಾರಿ ವಿಕ್ಷಣೆ ವೇಳೆ ಶಾಸಕರು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಈ ವಿಚಾರ ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಆ.30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಗೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್

ಈಶ್ವರ್ ಖಂಡ್ರೆ ಅನುಭವ ಮಂಟಪಕ್ಕೆ ಭೇಟಿ ನೀಡಿದ ವೇಳೆ ಶಾಸಕ ಶರಣು ಸಲಗರ್ ಕಾಲಿಗೆ ಬಿದ್ದಿದ್ದು, ಲೋಕಸಭಾ (Loksabha Election) ಹೊತ್ತಲ್ಲಿ ಕಾಂಗ್ರೆಸ್ (Congress) ಪ್ಲಾನ್ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮರಾಠಿಗರಿಗೆ ಟಿಕೆಟ್ ನೀಡಿ ಎಂದು ಹೇಳಿ ಪರೋಕ್ಷವಾಗಿ ಕೇಂದ್ರ ಸಚಿವ ಭಗವಂತ್‍ಗೆ ಟಾಂಗ್ ನೀಡಿದ್ದ ಸಲಗರ್, ಇಂದು ಈಶ್ವರ್ ಖಂಡ್ರೆ ಕಾಲಿಗೆ ಬಿದ್ದು ಖೂಬಾಗೆ ಮತ್ತೆ ಟಾಂಗ್ ನೀಡಿದ್ದಾರೆ.

ಸದ್ಯ ಬಿಜೆಪಿ ಶಾಸಕ ಸಲಗರ್ ಈಶ್ವರ್ ಖಂಡ್ರೆ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗುತ್ತಿದೆ.

Web Stories

Share This Article