ತೆಲುಗು ನಟ ಬ್ರಹ್ಮಾನಂದಂ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳು

Public TV
1 Min Read
ram charan 1 2

ತೆಲುಗು ಸಿನಿಮಾ ರಂಗದ ಹಾಸ್ಯ ನಟ ಬ್ರಹ್ಮಾನಂದಂ (Brahmanandam) ಕಿರಿಯ ಪುತ್ರ ಸಿದ್ಧಾರ್ಥ್ (Siddarth) ಅವರು ಐಶ್ವರ್ಯಾ (Aishwarya) ಜೊತೆ ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಹ್ಮಾನಂದಂ ಪುತ್ರನ ಅದ್ದೂರಿ ಮದುವೆ ಆರತಕ್ಷತೆಯಲ್ಲಿ ರಾಮ್ ಚರಣ್ (Ram Charan), ಪವನ್ ಕಲ್ಯಾಣ್ ಸೇರಿದಂತೆ ಹಲವು ತೆಲುಗು ಕಲಾವಿದರ ದಂಡೇ ಸಮಾರಂಭದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.

pawan kalyan 1 1

ಬ್ರಹ್ಮಾನಂದಂ ಪುತ್ರ ಸಿದ್ಧಾರ್ಥ್ ವಿದೇಶದಲ್ಲಿಯೇ ವಿದ್ಯಾಬ್ಯಾಸ ಮಾಡಿದ್ದಾರೆ. ಅಲ್ಲಿಯೇ ಕೆಲಸ ಮಾಡ್ತಿದ್ದಾರೆ. ಇನ್ನೂ ಐಶ್ವರ್ಯಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಕಳೆದ ಮೇ 21ರಂದು ಎಂಗೇಜ್‌ಮೆಂಟ್ ಆಗಿತ್ತು. ಇದೀಗ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಇದನ್ನೂ ಓದಿ:‘ದೇವರ’ ಸಿನಿಮಾದಲ್ಲಿನ ಸೈಫ್ ಅಲಿಖಾನ್ ಲುಕ್ ಗೆ ಫ್ಯಾನ್ಸ್ ಫಿದಾ

balayya

ತೆಲುಗು ನಟ ಪವನ್ ಕಲ್ಯಾಣ್‌ಗೂ (Pawan Kalyan) ಬ್ರಹ್ಮಾನಂದಂಗೂ ಉತ್ತಮ ಒಡನಾಟವಿದೆ. ಸಿದ್ಧಾರ್ಥ್ ಮದುವೆಯಲ್ಲಿ ಪವನ್ ಕಲ್ಯಾಣ್, ಬಾಲಯ್ಯ, ರಾಮ್ ಚರಣ್ ದಂಪತಿ ಭಾಗಿಯಾಗಿದ್ದಾರೆ. ನವಜೋಡಿಗೆ ಶುಭಹಾರೈಸಿದ್ದಾರೆ.

ಸಿದ್ಧಾರ್ಥ್- ಐಶ್ವರ್ಯಾ ಮದುವೆ ಆರತಕ್ಷತೆ ಸಂಭ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಿರಿಯ ನಟ ಶ್ರೀನಿವಾಸ್ ರಾವ್, ಮೋಹನ್ ಬಾಬು ಕುಟುಂಬ, ಕನ್ನಡದ ನಟ ಸಾಯಿಕುಮಾರ್ ಫ್ಯಾಮಿಲಿ ಹಲವರು ಪಾಲ್ಗೊಂಡಿದ್ದಾರೆ.

Share This Article