ವಾಷಿಂಗ್ಟನ್: ಭಾರತೀಯ ಅಮೆರಿಕನ್ ಶಾಸಕ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಅಮೆರಿಕ ಅಧ್ಯಕ್ಷ (US Presidential Candidate) ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ವಿವೇಕ್ ಬಗ್ಗೆ ಟ್ವಿಟ್ಟರ್ ಮಾಲೀಕ ಎಲೋನ್ ಮಸ್ಕ್ (Elon Musk) ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.
ರಿಪಬ್ಲಿಕನ್ ನಾಯಕ ವಿವೇಕ್, ಮಾಜಿ ಫಾಕ್ಸ್ ನ್ಯೂಸ್ ಆ್ಯಂಕರ್ ಟಕರ್ ಕಾರ್ಲ್‌ಸನ್‌ಗೆ ನೀಡಿದ ಸಂದರ್ಶನದ ವೀಡಿಯೋವನ್ನು ಎಲೋನ್ ಮಸ್ಕ್ ತಮ್ಮ ಟ್ವೀಟ್ ಖಾತೆಯಲ್ಲಿ (ಎಕ್ಸ್) ಹಂಚಿಕೊಂಡಿದ್ದಾರೆ. ‘ಅವರು (ವಿವೇಕ್) ಅತ್ಯಂತ ಭರವಸೆಯ ಅಭ್ಯರ್ಥಿ’ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು
ಕೇರಳದಿಂದ ಅಮೆರಿಕಗೆ ವಲಸೆ ಬಂದಿದ್ದ ಭಾರತೀಯ ದಂಪತಿ ಪುತ್ರ ವಿವೇಕ್ ರಾಮಸ್ವಾಮಿ. ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದ ಟೆಕ್-ಉದ್ಯಮಿಯಾಗಿದ್ದರು.
ವಿವೇಕ್ ರಾಮಸ್ವಾಮಿ, ನಿಕ್ಕಿ ಹ್ಯಾಲಿ ಮತ್ತು ಹರ್ಷವರ್ಧನ್ ಸಿಂಗ್ ಅವರು ಜನವರಿಯಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಅಮೆರಿಕನ್ ನಾಯಕರು. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ – 10 ಮಂದಿ ದುರ್ಮರಣ
Web Stories