ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

Public TV
1 Min Read
siddarth malhotra

ಬಾಲಿವುಡ್ (Bollywood) ಬ್ಯೂಟಿ ಕಿಯಾರಾ ಅಡ್ವಾಣಿಗೆ (Kiara Advani) ಈ ವರ್ಷದ ಜನ್ಮದಿನ ಸಖತ್ ಸ್ಪೆಷಲ್ ಆಗಿತ್ತು. ಪತಿ ಸಿದ್ಧಾರ್ಥ್ (Siddarth Malhotra) ಜೊತೆ ಥೈಲ್ಯಾಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಿಯಾರಾ ಬರ್ತ್‌ಡೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಕಿಯಾರಾಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಎದುರಾಗಿದೆ. ಮದುವೆಯಾದ್ಮೇಲೆ ಸಿದ್ಧಾರ್ಥ್‌ಗಾಗಿ ತಯಾರಿಸಿದ ಮೊದಲ ಅಡುಗೆ ಯಾವುದು? ಎಂಬ ಪ್ರಶ್ನೆಗೆ ಅಚ್ಚರಿಯ ಹೇಳಿಕೆಯನ್ನ ನಟಿ ನೀಡಿದ್ದಾರೆ.

kiara advani

ಮದುವೆ ಆದ ಬಳಿಕ ನೀವು ಮಾಡಿದ ಮೊದಲ ತಿನಿಸು ಯಾವುದು ಎಂದು ಕಿಯಾರಾಗೆ ಕೇಳಲಾಯಿತು. ಇದಕ್ಕೆ ಕಿಯಾರಾ ಅವರು ಉತ್ತರಿಸಿದ್ದಾರೆ. ಇಲ್ಲಿಯವರೆಗೆ ನಾನು ಏನನ್ನೂ ಮಾಡಿಲ್ಲ. ಬಹುಶಃ ನೀರನ್ನು ಬಿಸಿ ಮಾಡಿರಬಹುದು ಅಷ್ಟೇ. ನನ್ನ ಪತಿಗೆ ಅಡುಗೆ ಮಾಡುವುದು ಎಂದರೆ ಇಷ್ಟ. ಅವರು ಯಾವಾಗಲೂ ಏನಾದರೂ ಮಾಡುತ್ತಲೇ ಇರುತ್ತಾರೆ. ನಾನು ಕೂಡ ಅದನ್ನು ತಿಂದು ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

kiara advani

ಸಿದ್ದಾರ್ಥ್ ಅವರು ವಿಶೇಷವಾಗಿ ತಯಾರಿಸುವ ಪದಾರ್ಥ ಯಾವುದು ಎಂದು ಕೇಳಲಾಯಿತು. ಇದಕ್ಕೆ ಕಿಯಾರಾ ಬ್ರೆಡ್ ಎನ್ನುವ ಉತ್ತರ ನೀಡಿದ್ದಾರೆ. ಸಿದ್ದಾರ್ಥ್ ಅವರು ಬ್ರೆಡ್‌ನ ಚೆನ್ನಾಗಿ ಮಾಡುತ್ತಾರೆ. ಅದನ್ನು ಮಾಡೋದು ನಿಜಕ್ಕೂ ಕಠಿಣ ಸವಾಲು. ಆದರೆ, ಸಿದ್ದಾರ್ಥ್ ಬ್ರೆಡ್‌ನ ಚೆನ್ನಾಗಿ ಸಿದ್ಧಪಡಿಸುತ್ತಾರೆ ಎಂದು ಕಿಯಾರಾ ಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸಿದ್ಧಾರ್ಥ್- ಕಿಯಾರಾ ಅಡ್ವಾಣಿ ಈ ವರ್ಷ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದರು. ಇಬ್ಬರು ಜೊತೆಯಾಗಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಮದುವೆ ಬಳಿಕ ಕಿಯಾರಾ ಮತ್ತಷ್ಟು ಬೋಲ್ಡ್‌ ಆಗಿ ಕಾಣಿಸಿಕೊಳ್ತಿದ್ದಾರೆ.

Share This Article