ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವು

Public TV
1 Min Read
Power 1

ಚಿಕ್ಕೋಡಿ: ದುರಸ್ತಿ ಕಾರ್ಯ ಮಾಡುತ್ತಿದ್ದ ವೇಳೆ ವಿದ್ಯುತ್ (Electricity) ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ (HESCOM) ಗುತ್ತಿಗೆ ನೌಕರ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಜಿಲ್ಲೆ ಚಿಕ್ಕೋಡಿಯ (Chikkodi) ಹೊಸಪೇಟೆ ಗಲ್ಲಿಯಲ್ಲಿ ನಡೆದಿದೆ.

ಚಿಕ್ಕೋಡಿಯ ದಫೇದರ್‌ಕೋಡಿ ನಿವಾಸಿ ಸಿದ್ದರಾಮ ಕುಪವಾಡೆ (38) ಮೃತ ನೌಕರ. ವಿದ್ಯುತ್ ಕಂಬದ ಮೇಲೆ ದುರಸ್ತಿ ಮಾಡುವ ವೇಳೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

electricity bescom power
ಸಾಂದರ್ಭಿಕ ಚಿತ್ರ

ದುರಸ್ತಿ ಕಾರ್ಯಕ್ಕಾಗಿ ಲೈನ್‌ಮೆನ್‌ವೊಬ್ಬ ಗುತ್ತಿಗೆ ಆಧಾರದ ಮೇಲೆ ಸಿದ್ದರಾಮನನ್ನ ಕೆಲಸಕ್ಕೆ ಕರೆ ತಂದಿದ್ದ. ಹೊಸಪೇಟೆ ಗಲ್ಲಿ ಹೊರವಲಯದ ಕೃಷಿ ಜಮೀನು ಬಳಿಯ ವಿದ್ಯುತ್ ಕಂಬ ಏರಿ ಸಿದ್ದರಾಮಯ್ಯ ದುರಸ್ತಿ ಕೆಲಸ ಮಾಡುತ್ತಿದ್ದ. ದುರಸ್ತಿ ಕೆಲಸಕ್ಕೆ ಬಂದಿದ್ದ ಮೂವರಲ್ಲಿ ಉಳಿದ ಇಬ್ಬರು ಕೆಳಗೆ ನಿಂತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಸಿದ್ದರಾಮ ಕುಪವಾಡೆ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ವ್ಯಕ್ತಿಯನ್ನ ಕೆಲಸಕ್ಕೆ ತಂದಿದ್ದ ಹೆಸ್ಕಾಂ ಲೈನ್‌ಮೆನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಮೃತನಿಗೆ ಸೂಕ್ತ ಪರಿಹಾರ ಕೊಡುವಂತೆ ಸಿದ್ದರಾಮ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗಷ್ಟೇ ಗಂಡಸ್ತನ ಮೀಸೆ ಇರೋದಲ್ಲ, ಹಿಂದೂ ಹುಡುಗರಿಗೂ ಇದೆ: ಸ್ವಾಮೀಜಿಯಿಂದ ವಿವಾದಾತ್ಮಕ ಹೇಳಿಕೆ

ಚಿಕಿತ್ಸೆ ಫಲಿಸದೇ ಯುವಕ ಸಾವು:
ಚಿತ್ರದುರ್ಗದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೋಲಾರದ ಕೆಜಿಎಫ್ ಮೂಲದ ಯುವಕ ಮಧುಸೂದನ್ (24) ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತ ನಡೆದ ಬಳಿಕ ಯುವಕನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸದ್ಯ ಯುವಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Web Stories

Share This Article