ನಾನಿನ್ನೂ ಸಿಂಗಲ್, ದಿಶಾ ಜೊತೆಗಿನ ಬ್ರೇಕಪ್ ಬಗ್ಗೆ ಟೈಗರ್ ಶ್ರಾಫ್ ಸ್ಪಷ್ಟನೆ

Public TV
1 Min Read
tiger shroff and disha patani 2

ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff)  ಅವರು ದಿಶಾ (Disha Patani) ಜೊತೆಗಿನ ಬ್ರೇಕಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ತಮಗೆ ಕಮಿಟೆಡ್ ರಿಲೇಷನ್‌ಶಿಪ್ ಇಷ್ಟವಿಲ್ಲ, ನಾನು ಸಿಂಗಲ್ ಎನ್ನುವ ಮೂಲಕ ನಟ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಊಹಾಪೋಹಗಳಿಗೂ ಬ್ರೇಕ್‌ ಹಾಕಿದ್ದಾರೆ.

tiger shroff and disha patani 3

ಟೈಗರ್ ಶ್ರಾಫ್- ದಿಶಾ ಪಟಾನಿ ಮದುವೆಯಾಗುವಂತೆ ದಿಶಾ ಬೇಡಿಕೆ ಇಟ್ಟಿದ್ದರು. ಕಮಿಟೆಡ್ ರಿಲೇಷನ್‌ಶಿಪ್ ಇಷ್ಟವಿಲ್ಲದ ಕಾರಣ ಟೈಗರ್ ಶ್ರಾಫ್ ನೋ ಎಂದಿದ್ದರು. ಹಾಗಾಗಿ ಇಬ್ಬರು 2020ರಲ್ಲೇ ಬೇರೆಯಾದರು ಎನ್ನಲಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಟೈಗರ್ ಶ್ರಾಫ್, ತಾವು ಸಿಂಗಲ್ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

tiger shroff

ಕಳೆದ ಎರಡು ವರ್ಷಗಳಿಂದ ನಾನು ಸಿಂಗಲ್ ಆಗಿಯೇ ಇದ್ದೇನೆ. ಇತ್ತೀಚೆಗೆ ನನ್ನ ಹೆಸರು ಕೆಲವರ ಜೊತೆ ತಳುಕು ಹಾಕಿಕೊಂಡಿದೆ. ಅದು ಸುಳ್ಳು ಎಂದಿದ್ದಾರೆ. ಪರೋಕ್ಷವಾಗಿ ದಿಶಾ ಪಟಾನಿ ಜೊತೆಗಿನ ಬ್ರೇಕಪ್‌ ಕಹಾನಿ ಬಗ್ಗೆ ಉತ್ತರಿಸಿದ್ದಾರೆ. ದಿಶಾ ಧನುಕಾ(Deesha Dhanuka) ಜೊತೆ ಟೈಗರ್ ಶ್ರಾಫ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ಹರಿದಾಡಿತ್ತು. ಆ ವಿಚಾರವಾಗಿಯೂ ಟೈಗರ್ ಶ್ರಾಫ್ ಸ್ಪಷ್ಟನೆ ಕೊಟ್ಟಂತೆ ಆಗಿದೆ.

ಸದ್ಯ ದಿಶಾ ಪಟಾನಿ ಅವರಿಗೆ ಹೊಸ ಬಾಯ್‌ಫ್ರೆಂಡ್ ಸಿಕ್ಕಿದ್ದಾರೆ. ಅಲೆಕ್ಸಾಂಡರ್ ಜೊತೆ ನಟಿ ಡೇಟ್ ಮಾಡುತ್ತಿದ್ದಾರೆ. ಬಾಲಿವುಡ್ (Bollywood)  ಪಾರ್ಟಿಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article