ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

Public TV
2 Min Read
sreeleela

ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಆಫರ್ ಮೇಲೆ ಆಫರ್. ರಶ್ಮಿಕಾ ಮಂದಣ್ಣ(Rashmika Mandanna)- ಪೂಜಾ ಹೆಗ್ಡೆಗೆ ಸೆಡ್ಡು ಹೊಡೆದು ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ತೆಲುಗು ಅಡ್ಡಾದಿಂದ ನಯಾ ಖಬರ್ ಗಿರಕಿ ಹೊಡೆಯುತ್ತಿದೆ. ಮೆಗಾಸ್ಟಾರ್ ಚಿರಂಜೀವಿ- ತ್ರಿಷಾ ನಟನೆಯ ಸಿನಿಮಾದಲ್ಲಿ ಭರಾಟೆ ನಟಿ ನಟಿಸುವ ಬಂಪರ್ ಆಫರ್ ಬಾಚಿಕೊಂಡಿದ್ದಾರೆ.

sreeleela 2

ಡೇಂಜರ್ ಪಿಲ್ಲಾ ಶ್ರೀಲೀಲಾ ನಸೀಬು ಚೆನ್ನಾಗಿದೆ. ಕನ್ನಡದ 3 ಸಿನಿಮಾ, ತೆಲುಗಿನಲ್ಲಿ ಎರಡೇ ಚಿತ್ರಕ್ಕೆ ಬ್ಯಾಕ್ ಟು ಬ್ಯಾಕ್ 8ಕ್ಕೂ ಹೆಚ್ಚು ಚಿತ್ರಗಳಿಗೆ ಲೀಲಾ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ಬಿಗ್ ಬ್ಯಾನರ್ ಚಿತ್ರಗಳಿಗೆ ರಶ್ಮಿಕಾ, ಪೂಜಾ, ಕೃತಿ ಶೆಟ್ಟಿ (Krithi Shetty) ಅವರೇ ಬೇಕು ಎಂದು ಭಜನೆ ಮಾಡುತ್ತಿದ್ದ ನಿರ್ಮಾಪಕರ ಪಾಲಿಗೆ ಇಷ್ಟದೇವತೆಯಾಗಿ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.

sreeleela

ತೆಲುಗಿನ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಮೆಗಾಸ್ಟಾರ್ ಚಿರಂಜೀವಿ- ನಟಿ ತ್ರಿಷಾ ಕೃಷನ್ ಜೋಡಿಯಾಗಿ ಬರುತ್ತಿದ್ದಾರೆ. ಮಲಯಾಳಂ ಬ್ರೋ ಡ್ಯಾಡಿ ಸಿನಿಮಾವನ್ನ ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮೆಗಾಸ್ಟಾರ್, ತ್ರಿಷಾ ಇರಲಿದ್ದಾರೆ. ಇವರ ಜೊತೆ ತೆಲುಗಿನ ಹೀರೋ ಶರ್ವಾನಂದ್ ಕೂಡ ಆಕ್ಟ್ ಮಾಡ್ತಿದ್ದಾರೆ.

sreeleela 2

ಬ್ರೋ ಡ್ಯಾಡಿ (Bro Daddy)  ತಂದೆ-ಮಗನ ಕುರಿತ ಸಿನಿಮಾವಾಗಿದ್ದು ಚಿರಂಜೀವಿ- ತ್ರಿಷಾ(Trisha), ಪತಿ ಮತ್ತು ಪತ್ನಿ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿ ಮಗನ ಪಾತ್ರಕ್ಕೆ ಶರ್ವಾನಂದ್ ಫೈನಲ್ ಆಗಿದ್ದಾರೆ. ಶರ್ವಾನಂದ್‌ಗೆ (Sharwanand) ನಾಯಕಿಯಾಗಿ ಶ್ರೀಲೀಲಾ (Sreeleela) ಫಿಕ್ಸ್ ಆಗಿದ್ದಾರೆ. ಈ ಚಿತ್ರಕ್ಕೆ ಮೆಗಾಸ್ಟಾರ್ ಪುತ್ರಿ ಸುಶ್ಮಿತಾ ಕೊನಿಡೆಲಾ ಅವರು ನಿರ್ಮಾಣ ಮಾಡ್ತಿದ್ದಾರೆ. ಇದನ್ನೂ ಓದಿ:ಕೇವಲ ಒಂದು ಹಾಡಿಗೆ 90 ಕೋಟಿ ಖರ್ಚು ಮಾಡ್ತಾರಂತೆ ‘ಗೇಮ್‌ಚೇಂಜರ್’ ಚಿತ್ರತಂಡ

ಮಲಯಾಳಂನಲ್ಲಿ 2022ರಲ್ಲಿ ಬ್ರೋ ಡ್ಯಾಡಿ ಸಿನಿಮಾ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಮೋಹನ್ ಲಾಲ್(Mohanlal), ಪೃಥ್ವಿರಾಜ್ ಸುಕುಮಾರನ್, ಮೀನಾ, ಕಲ್ಯಾಣಿ ಪ್ರಿಯಾದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಮಾಲಿವುಡ್‌ನಲ್ಲಿ ಹಿಟ್ ಆಗಿತ್ತು.ಈಗ ಇದೇ ಚಿತ್ರವನ್ನು ತೆಲುಗಿನಲ್ಲಿ ತರಲು ಪ್ಲ್ಯಾನ್ ಮಾಡಿದ್ದಾರೆ. ಇದು ಸದ್ಯ ಟಾಲಿವುಡ್‌ನ ಹಾಟ್ ಟಾಪಿಕ್ ಆಗಿದ್ದು, ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article