ಅರಾವಳಿ ಬೆಟ್ಟದಲ್ಲಿ ಅಡಗಿಕುಳಿತ ಜನ – ಹರಿಯಾಣ ಗಲಭೆ ದಂಗೆಕೋರರ ಸುಳಿವು ಪತ್ತೆ!

Public TV
1 Min Read
Nuh rioters

ಚಂಡೀಗಢ: ಕೋಮುಗಲಭೆಯಿಂದ ತತ್ತರಿಸಿದ ಹರಿಯಾಣದ ನೋಹ್ ಜಿಲ್ಲೆಯಲ್ಲಿ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ.

ನಿನ್ನೆ ರಾತ್ರಿ ಮತ್ತೆರಡು ಪ್ರಾರ್ಥನಾ ಮಂದಿರಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಕರ್ಫ್ಯೂ ಮುಂದುವರಿಸಲಾಗಿದೆ. ಬೆಳಗ್ಗೆಯಿಂದ ಯಾವುದೇ ಘರ್ಷಣೆ ನಡೆಯದ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗ್ಯವಸ್ತುಗಳ ಖರೀದಿಗಾಗಿ ಕರ್ಫ್ಯೂ ಸಡಿಲಿಸಲಾಗಿತ್ತು. ಇದನ್ನೂ ಓದಿ: Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

haryana clash 1

ಇದೀಗ ಗಲಭೆಕೋರರು ನುಹ್‌ನಲ್ಲಿರುವ ಅರಾವಳಿ ಬೆಟ್ಟಗಳಲ್ಲಿ ಅಡಗಿ ಕುಳಿತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನುಹ್‌ ಜಿಲ್ಲೆಯ ಪುರುಷರು ಬಂಧನದ ಭಯದಿಂದ ತಪ್ಪಿಸಿಕೊಳ್ಳಲು ಈ ಬೆಟ್ಟದ ಆಯಕಟ್ಟಿನ ಸ್ಥಳಗಳಲ್ಲಿ ಅಡಗಿ ಕುಳಿತಿದ್ದಾರೆ. ಅದರಲ್ಲಿ ಶಂಕಿತ ದಂಗೆಕೋರರು ಇರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಸದ್ಯ ಪೊಲೀಸರು ದಂಗೆಕೋರರ ಬೆನ್ನುಹತ್ತಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಅಪಘಾತಗಳಿಗೆ ಕಾರಣ ತಿಳಿಸಿದ ಕೇಂದ್ರ ಹೆದ್ದಾರಿ ಸಚಿವಾಲಯ

haryana police allert

ಇಂಟರ್ನೆಟ್ ಸೇವೆಗಳನ್ನು ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ ಸಂಪರ್ಕ ಕಲ್ಪಿಸಲಾಗಿತ್ತು. ಈ ಮಧ್ಯೆ ಗಲಭೆ ವಿಚಾರದಲ್ಲಿ ರಾಜಕೀಯ ತೀವ್ರಗೊಂಡಿದೆ. ಕೋಮು ಗಲಭೆ ಹಿಂದೆ ಕಾಂಗ್ರೆಸ್ ಪಾತ್ರವಿರುವ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅಸೆಂಬ್ಲಿ ನೀಡಿದ ಪ್ರಚೋದನಾಕಾರಿ ಹೇಳಿಕೆ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದೆ. ಘರ್ಷಣೆ ನಿಯಂತ್ರಣಕ್ಕೆ ಬಿಜೆಪಿ-ಜೆಜೆಪಿ ಸರ್ಕಾರ ಸಕಾಲದಲ್ಲಿ ಮುಂದಾಗಲಿಲ್ಲ.. ಇದ್ರಿಂದಲೇ ಇಷ್ಟೆಲ್ಲಾ ಆಗಿದೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.

Web Stories

Share This Article