ನಭಾ ನಟೇಶ್ ಹಾಟ್ ಅವತಾರ- ಆದ್ರೂ ಸಿಗದ ಸಿನಿಮಾ ಅವಕಾಶ

Public TV
1 Min Read
nabha natesh

‘ವಜ್ರಕಾಯ’ (Vajrakaya) ಸಿನಿಮಾ ಮೂಲಕ ನಭಾ ನಟೇಶ್ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಬಳಿಕ ಟಾಲಿವುಡ್‌ನತ್ತ ನಭಾ ಮುಖ ಮಾಡಿದ್ದರು. ಆಕ್ಸಿಡೆಂಟ್ ಬಳಿಕ ವಜ್ರಕಾಯ ಸುಂದರಿಗೆ ಅವಕಾಶ ಕಮ್ಮಿಯಾಗಿದೆ. ಸದ್ಯ ನಯಾ ಫೋಟೋಶೂಟ್‌ನಿಂದ ನಭಾ ಮಿಂಚ್ತಿದ್ದಾರೆ.

nabha natesh 1

ಇಂಡಸ್ಟಿçಯಲ್ಲಿ ಶ್ರೀಲೀಲಾ (Sreeleela), ರಶ್ಮಿಕಾ ಮಂದಣ್ಣ(Rashmika Mandanna), ಮೃಣಾಲ್ ಜಮಾನ ನಡೆಯುತ್ತಿದೆ. ಇದರ ಮಧ್ಯೆ ‘ಇಸ್ಮಾರ್ಟ್ ಶಂಕರ್’ (Ismart Shankar) ಬ್ಯೂಟಿ ನಭಾ ಕಡೆ ನಿರ್ಮಾಪಕರು ಕ್ಯಾರೇ ಅನ್ನುತ್ತಿಲ್ಲ. ಕನ್ನಡದ ವಜ್ರಕಾಯ ಚಿತ್ರ ಶಿವಣ್ಣಗೆ ನಾಯಕಿಯಾಗಿ ಅದ್ದೂರಿಯಾಗಿ ನಭಾ ನಟೇಶ್ (Nabha Natesh) ಎಂಟ್ರಿ ಕೊಟ್ಟರು. ಬಳಿಕ ರಾಮ್ ಪೋತಿನೇನಿ, ರವಿತೇಜಾಗೆ ನಾಯಕಿಯಾಗಿ ನಭಾ ಮಿಂಚಿದ್ದರು.

nabha 1

ಕಳೆದ ವರ್ಷ ತಮಗೆ ಆದ ಆಕ್ಸಿಡೆಂಟ್‌ನಿಂದ ಈಗ ಚೇತರಿಕೊಂಡಿದ್ದೇನೆ ಎಂದು ನಟಿ ನಭಾ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಈ ಮೂಲಕ ಮತ್ತೆ ಸಿನಿಮಾ ಮಾಡೋದಾಗಿ ಹೇಳಿದ್ದರು. ಸಾಲು ಸಾಲು ಫೋಟೋಶೂಟ್‌ನಿಂದ ನಭಾ ಹಾಟ್ ಪೋಸ್ ಕೊಡ್ತಿದ್ದಾರೆ. ಆದರೆ ಅವರಿಗೆ ಯಾವುದೇ ಸಿನಿಮಾ ಚಾನ್ಸ್ ಸಿಗುತ್ತಿಲ್ಲ. ಇದನ್ನೂ ಓದಿ:ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ

nabha

ಸದ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಹಾಟ್ ಲುಕ್‌ನಿಂದ ಪಡ್ಡೆಹುಡುಗರ ದಿಲ್ ಕದ್ದಿದ್ದಾರೆ. ಇನ್ನಾದರೂ ನಭಾಗೆ ಸಿನಿಮಾ ಚಾನ್ಸ್ ಸಿಗುತ್ತಾ? ಶ್ರೀಲೀಲಾ, ರಶ್ಮಿಕಾ, ಮೃಣಾಲ್‌ಗೆ ನಭಾ ಸಿನಿಮಾ ಚಾನ್ಸ್ ಗಿಟ್ಟಿಸಿಕೊಂಡು ಠಕ್ಕರ್ ಕೊಡ್ತಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

2021ರಲ್ಲಿ ಕಡೆಯದಾಗಿ ನಿತಿನ್ ನಾಯಕಿಯಾಗಿ ‘ಮೇಸ್ಟೋ’ ಸಿನಿಮಾದಲ್ಲಿ ನಟಿಸಿದ್ದರು. ನಿತಿನ್, ತಮನ್ನಾ ಜೊತೆ ನಭಾ ನಟೇಶ್ ಕೂಡ ಸಾಥ್ ನೀಡಿದ್ದರು. 2 ವರ್ಷಗಳಿಂದ ನಭಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಹೀಗಿರುವಾಗ ಮತ್ತೆ ಕನ್ನಡ ಸಿನಿಮಾಗೆ ಕಮ್‌ ಬ್ಯಾಕ್‌ ಆಗ್ತಾರಾ ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article