ಚಾಮರಾಜನಗರ: ಶಕ್ತಿ ಯೋಜನೆಯ (Shakti Scheme) ಪರಿಣಾಮ ಬಸ್ ಹತ್ತಲು ನೂಕುನುಗ್ಗಲು ಮಾಡಿ ನಾರಿಮಣಿಗಳು ಮತ್ತೊಂದು ಬಸ್ಸಿನ (Bus) ಬಾಗಿಲನ್ನು (Door) ಮುರಿದ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.
ಬಸ್ ಯಳಂದೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುತ್ತಿದ್ದು, ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ಸಾರಿಗೆ ಬಸ್ ಹತ್ತಲು ಮಹಿಳೆಯರು (Women) ಮುಗಿಬಿದ್ದಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ನಿಲ್ದಾಣದಲ್ಲಿ ಬಸ್ ಹತ್ತಲು ಮಹಿಳೆಯರು ನೂಕು ನುಗ್ಗಲು ಮಾಡಿದ್ದು, ಈ ಹಿನ್ನೆಲೆ ಬಸ್‌ನ ಬಾಗಿಲು ಮುರಿದು ಬಿದ್ದಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ: ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್
ಕೆಲ ದಿನಗಳ ಹಿಂದೆ ಇದೇ ರೀತಿ ಕೊಳ್ಳೆಗಾಲದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಸಾರಿಗೆ ಬಸ್ ಬಾಗಿಲು ಮುರಿದು ಹೋಗಿತ್ತು. ಇಷ್ಟು ಮಾತ್ರವಲ್ಲದೇ ಮಹಿಳೆಯರ ತಳ್ಳಾಟ ನೂಕಾಟದಲ್ಲಿ ಬಸ್‌ಗೆ ಅಳವಡಿಸಿದ್ದ ಕಬ್ಬಿಣದ ರಾಡ್ ಕೂಡಾ ಕಿತ್ತು ಹಾಕಿದ್ದರು. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್, ಬೆದರಿಕೆ
Web Stories