18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?

Public TV
2 Min Read
fardeen khan

ಣ್ಣದ ಬದುಕಿನಲ್ಲಿ ಡಿವೋರ್ಸ್, ಲವ್, ಬ್ರೇಕಪ್ ಎಲ್ಲವೂ ಕಾಮನ್ ಆಗಿದೆ. ಸೆಲೆಬ್ರಿಟಿ ಬದುಕು ತೆರೆಯ ಮೇಲೆ ಚೆಂದ ಕಾಣುವ ಹಾಗೆ, ತೆರೆಹಿಂದಿನ ಬದುಕು ಅಷ್ಟು ಚೆನ್ನಾಗಿರಲ್ಲ. ವೃತ್ತಿರಂಗದಲ್ಲಿ ಗೆದ್ದರು ಕೂಡ, ವೈಯಕ್ತಿಕ ಬದುಕಿನಲ್ಲಿ ಪಲ್ಟಿ ಹೊಡೆದಿರುತ್ತಾರೆ ಎಂಬುದು ಮತ್ತೆ ಪ್ರೂವ್ ಆಗಿದೆ. ಚಿತ್ರರಂಗದಲ್ಲಿ ಸಾಲು ಸಾಲು ಡಿವೋರ್ಸ್ (Divorce) ಸುದ್ದಿಯಿಂದ ಬೆಸತ್ತಿರೋ ಫ್ಯಾನ್ಸ್‌ಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ನಟ ಫರ್ದೀನ್ ಖಾನ್ ಅವರು 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ ಎಂಬ ಸುದ್ದಿ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

fardeen khan 1

ಸಮಂತಾ(Samantha), ಐಶ್ವರ್ಯ- ಧನುಷ್, ನಿಹಾರಿಕಾ- ಚೈತನ್ಯ ಡಿವೋರ್ಸ್ ನಂತರ ಬಾಲಿವುಡ್ ನಟ ಫರ್ದೀನ್ ಖಾನ್ ಅವರು ತಮ್ಮ 18 ವರ್ಷಗಳ ವೈವಾಹಿಕ ಬದುಕಿಗೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಮೆಗಾಸ್ಟಾರ್ ಪುತ್ರಿ ನಿಹಾರಿಕಾ ಅವರು ತಮ್ಮ ಡಿವೋರ್ಸ್ ಬಗ್ಗೆ ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊರ್ವ ನಟನ ದಾಂಪತ್ಯ ಬದುಕು ಏರುಪೇರಾಗಿದೆ.

fardeen khan 2

ಫರ್ದೀನ್ ಖಾನ್ (Fardeen Khan) ಮತ್ತು ನತಾಶಾ ಮಾಧ್ವಾನಿ (Natasha Madhvani) ವಿಚ್ಛೇದನ ಪಡೆಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಫರ್ದೀನ್ ಅವರು ಮುಂಬೈನಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ರೆ, ನತಾಶಾ ಮಾಧ್ವಾನಿ ಅವರು ಲಂಡನ್‌ನಲ್ಲಿ ಮಕ್ಕಳ ಜೊತೆ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ. 2005ರಲ್ಲಿ ಫರ್ದೀನ್- ನತಾಶಾ ಮಾಧ್ವಾನಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಈ ಜೋಡಿಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ.

‘ನೋ ಎಂಟ್ರಿ’ (No Entry) ಸಿನಿಮಾದ ನಟ ಫರ್ದೀನ್ ಖಾನ್ (Fardeen Khan) ಅವರು ತಮ್ಮ ಪತ್ನಿಗೆ ಯಾವ ವಿಚಾರಕ್ಕೆ ಡಿವೋರ್ಸ್ (Divorce) ನೀಡ್ತಿದ್ದಾರೆ. ಇಬ್ಬರ ನಡುವೆ ಏನಾಗಿದೆ. ಸಮಸ್ಯೆ ಎನು ಎಂಬುದು ತಿಳಿದು ಬಂದಿಲ್ಲ. ಸದ್ಯ ಈ ನ್ಯೂಸ್ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. 18 ವರ್ಷಗಳು ಜೊತೆಯಾಗಿದ್ದು, ಈಗ ಬೇರೆಯಾಗುತ್ತಿರೋದು ಯಾಕೆ ಎಂಬ ಅನುಮಾನ ಅಭಿಮಾನಿಗಳನ್ನ ಕಾಡುತ್ತಿದೆ. ಎಲ್ಲದಕ್ಕೂ ಅಧಿಕೃತ ಘೋಷಣೆ ಆಗುವವರೆಗೂ ಕಾಯಬೇಕಿದೆ.

Share This Article