ಲಕ್ನೋ: ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಪತಿ ಎಂದು ಭಾವಿಸಿ ಮಹಿಳೆಯೊಬ್ಬರು (Woman) ಬೇರೊಬ್ಬ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಬಂದು ಬಳಿಕ ಶಾಕ್ ಆದ ಘಟನೆ ಉತ್ತರಪ್ರದೇಶದ (Uttar Pradesh) ಬಲ್ಲಿಯಾದಲ್ಲಿ ನಡೆದಿದೆ.
ಜಾನಕಿ ದೇವಿ ಎಂಬ ಮಹಿಳೆ 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಪತಿ ಮೋತಿ ಚಂದ್ ಎಂದು ಭಾವಿಸಿ ವಿಶೇಷಚೇತನ ವ್ಯಕ್ತಿಯೊಬ್ಬನನ್ನು ಮನೆಗೆ ಕರೆತಂದಿದ್ದಾಳೆ. ಮಹಿಳೆ ಆತನನ್ನು ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ (Hospital) ಹೊರಗೆ ನೋಡಿದ್ದಾಳೆ. ತನ್ನ ಗಂಡ ಎಂದು ತಪ್ಪಾಗಿ ಭಾವಿಸಿ ‘ಇಷ್ಟು ದಿನ ಎಲ್ಲಿಗೆ ಹೋಗಿದ್ದೆ?’ ಎಂದು ವಿಚಾರಿಸಿದ್ದಾಳೆ. ಬಳಿಕ ಆತನನ್ನು ಮನೆಗೆ ಕರೆದೊಯ್ದಿದ್ದಾಳೆ.
ಎಷ್ಟೇ ಮಾತಾಡಿಸಿದರು ಆತ ಮೌನವಾಗಿದ್ದ. ಬಳಿಕ ವ್ಯಕ್ತಿಯ ದೇಹದ ಗುರುತುಗಳನ್ನು ಪರಿಶೀಲಿಸಿದಾಗ ಆತ ಮೋತಿ ಚಂದ್ ಅಲ್ಲ ಎಂಬುದು ಅರಿವಿಗೆ ಬಂದಿದೆ. ಆತನನ್ನು ರಾಹುಲ್ ಎಂದು ಗುರುತಿಸಲಾಗಿದೆ. ತನ್ನ ತಪ್ಪಿನ ಅರಿವಾದ ಮೇಲೆ ಮಹಿಳೆ ರಾಹುಲ್ ಹಾಗೂ ಆತನ ಕುಟುಂಬಸ್ಥರ ಕ್ಷಮೆ ಕೇಳಿದ್ದಾಳೆ.
ಬಳಿಕ ರಾಹುಲ್ ಸಂಬಂಧಿಕರನ್ನು ಸಂಪರ್ಕಿಸಲಾಗಿದೆ. ಗ್ರಾಮದ ಮುಖಂಡರು ಮತ್ತು ಕೆಲವರು ಆತನ ಗುರುತನ್ನು ಖಚಿತಪಡಿಸಿದ್ದಾರೆ. ಬಳಿಕ ಆತನನ್ನು ಕುಟುಂಬದವರ ಜೊತೆ ಕಳುಹಿಸಲಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]