ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರ ಬೆಳೆಸೋದು ಕಡ್ಡಾಯ – ಆರೋಗ್ಯ ಇಲಾಖೆ ಆದೇಶ

Public TV
1 Min Read
Plant 2

ಬೆಂಗಳೂರು: ಇನ್ಮುಂದೆ ಪ್ರತಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರಗಳನ್ನ ಬೆಳೆಸಿ ನಿರ್ವಹಣೆ ಮಾಡುವುದನ್ನ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ (Health Department) ಆದೇಶ ಹೊರಡಿಸಿದೆ.

01 2

ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆರೋಗ್ಯ ಸಂಸ್ಥೆಗಳ ಆವರಣದಲ್ಲಿ ಉತ್ತಮ ಗಾಳಿ ನೀಡುವಂತಹ ಹಾಗೂ ಔಷಧೀಯ ಗಿಡ/ಮರಗಳನ್ನ (Plant Or Tree) ಬೆಳೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಇದನ್ನೂ ಓದಿ: T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

01 1

ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ತಪ್ಪಿಸಲು ಆರೋಗ್ಯ ಇಲಾಖೆ ಹೊಸ ಕ್ರಮ ತೆಗೆದುಕೊಂಡಿದೆ. ʻಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯʼ ಎಂಬ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಗಿಡ/ಮರಗಳನ್ನ ಕಡ್ಡಾಯವಾಗಿ ಬೆಳೆಸುವಂತೆ ಹೇಳಿದೆ.

health tips pudina

ಗಿಡಗಳನ್ನ ನೆಡುವುದರಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಆವರಣದಲ್ಲಿ ಹಸಿರು ವಾತಾವರಣ ನಿರ್ಮಾಣ ಆಗುತ್ತದೆ. ಜೊತೆಗೆ ಮಳೆಯ ನೀರನ್ನು ಭೂಮಿ ಹೀರಿಕೊಳ್ಳುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಹಾಗಾಗಿ ನೆಟ್ಟ ಗಿಡಗಳನ್ನ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆಯೂ ಎಚ್ಚರಿಸಿದೆ. ಇದನ್ನೂ ಓದಿ: ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ.. ಯಾರಿಗೆ ಎಷ್ಟು ವೋಟು ಬರುತ್ತೆ ನೋಡೋಣ – ಪ್ರದೀಪ್ ಈಶ್ವರ್‌ಗೆ ಸುಧಾಕರ್ ಸವಾಲು

ಜುಲೈ ತಿಂಗಳ ಒಳಗಡೆ ಕಡ್ಡಾಯವಾಗಿ ಆಸ್ಫತ್ರೆ ಆವರಣದಲ್ಲಿ ಗಡಿ ನೆಡುವ ಚಟುವಟಿಕೆ ಮುಗಿಸುವಂತೆ ತಾಕೀತು ಮಾಡಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಗಾಳಿ ಸಿಗುವ ಹಾಗೆ ಗಿಡ-ಮರಗಳಿರುವಂತೆ ನೋಡಿಕೊಳ್ಳಬೇಕು ಅಂತಾ ತಾಕೀತು ಮಾಡಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article