‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ

Public TV
1 Min Read
jayant sarvarkar

ರಾಠಿ ಚಿತ್ರರಂಗದ ಹಿರಿಯ ನಟ ಜಯಂತ್ ಸಾವರ್ಕರ್ (Jayant Savarkar) ಅವರು 87ನೇ ವಯಸ್ಸಿಗೆ ನಿಧನರಾಗಿದ್ದಾರೆ. ತಂದೆ ಜಯಂತ್ ನಿಧನದ ಕುರಿತು ಕೌಸ್ತುಭ್ ಸಾವರ್ಕರ್ ಖಚಿತಪಡಿಸಿದ್ದಾರೆ. ಮರಾಠಿ- ಹಿಂದಿ ಸಿನಿಮಾರಂಗದಲ್ಲಿ ಕಳೆದ ಆರು ದಶಕಗಳಿಂದ ಜಯಂತ್ ನಟನೆಯ ಮೂಲಕ ರಂಜಿಸಿದ್ದರು.

jayanth savarkar

ತಂದೆಯವರಿಗೆ 15 ದಿನಗಳ ಹಿಂದೆ ಕಡಿಮೆ ರಕ್ತದೊತ್ತಡ ಉಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ, ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ ಎಂದು ಪುತ್ರ ಕೌಸ್ತುಭ್ ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಟ ಜಯಂತ್ ಅವರಿಗೆ ಪತ್ನಿ, ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಂದು (ಜುಲೈ 25) ಅವರ ಅಂತ್ಯಸಂಸ್ಕಾರ ನಡೆಯಲಿದೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ‌’ಬುದ್ಧಿವಂತ 2′ ಬಿಗ್ ಅಪ್‌ಡೇಟ್

ಜಯಂತ್ ಸಾವರ್ಕರ್ ಅವರು ಮರಾಠಿ, ಹಿಂದಿ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ನಟಿಸಿದ್ದಾರೆ. ಅವರು ಆರು ದಶಕಗಳು ನಟನೆಯಲ್ಲಿ ತೊಡಗಿಕೊಂಡಿದ್ದರು.

ಹಿಂದಿಯಲ್ಲಿ 2011ರಲ್ಲಿ ರಿಲೀಸ್ ಆದ ಅಜಯ್‌ ದೇವಗನ್‌ ನಟನೆಯ ‘ಸಿಂಗಂ’ (Singham) ಸಿನಿಮಾದಲ್ಲಿ ಕಮಲಾಕಾಂತ್ ಭೋಸ್ಲೆ ಪಾತ್ರ ಮಾಡಿದ್ದರು. ನಾಯಕಿ ಕಾಜಲ್ ಅಗರ್‌ವಾಲ್(Kajal Aggarwal) ಅವರ ಅಜ್ಜನ ಪಾತ್ರ ಇದಾಗಿತ್ತು. ರಾಕಿ ಹ್ಯಾಂಡ್ಸಮ್, ವಾಸ್ತವ್, ದಿ ರಿಯಾಲಿಟಿ ಮೊದಲಾದ ಚಿತ್ರಗಳಲ್ಲಿ ಜಯಂತ್ ಬಣ್ಣ ಹಚ್ಚಿದ್ದಾರೆ.

Share This Article