ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ

Public TV
1 Min Read
DEEPIKA DAS

ಸ್ಯಾಂಡಲ್‌ವುಡ್ ನಟಿ ದೀಪಿಕಾ ದಾಸ್ (Deepika Das) ಅವರು ದುಬೈಗೆ (Dubai) ಹಾರಿದ್ದಾರೆ. ಇತ್ತೀಚಿಗೆ ‘ಅಂತರಪಟ’ ಸೀರಿಯಲ್‌ನಲ್ಲಿ ಗೆಸ್ಟ್ ರೋಲ್‌ನಲ್ಲಿ ದೀಪಿಕಾ ಮಿಂಚಿದ್ದರು. ಸದ್ಯ ಶೂಟಿಂಗ್‌ನಿಂದ ಬ್ರೇಕ್‌ನಲ್ಲಿರೋ ದೀಪಿಕಾ ದಾಸ್ ದುಬೈನಲ್ಲಿ ಮಸ್ತಿ ಮಾಡ್ತಿದ್ದಾರೆ. ನಟಿಯ ನಯಾ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

DEEPIKA

ಕೃಷ್ಣ ರುಕ್ಮಿಣಿ, ನಾಗಿಣಿ (Nagini) ಸೀರಿಯಲ್‌ನಲ್ಲಿ ಮಿಂಚಿದ ದೀಪಿಕಾ ದಾಸ್ ಅವರು ಇತ್ತೀಚಿಗೆ ದೊಡ್ಮನೆಗೆ ಲಗ್ಗೆಯಿಡುವ ಮೂಲಕ ಗಮನ ಸೆಳೆದರು. ಲೇಡಿ ಬಾಸ್ ಆಗಿ ಗಮನ ಸೆಳೆದರು. ಈಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ದೀಪಿಕಾ ದಾಸ್ ರೆಡಿಯಾಗಿದ್ದಾರೆ.

DEEPIKA DAS

ದುಬೈಗೆ ಹಾರಿರೋ ಬಿಗ್ ಬಾಸ್ (Bigg Boss Kannada) ಬೆಡಗಿ ದೀಪಿಕಾ ದಾಸ್ ಅವರು ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಇದ್ದಾರೆ. ಡಿಫರೆಂಟ್ ಆಗಿರೋ ಕಲರ್‌ಫುಲ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ನಟಿಯ ಫೋಟೋ ನೋಡ್ತಿದ್ದಂತೆ, ಇದೇನಿದು? ಪುಂಗಿ ದಾಸಯ್ಯನ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದೀರಾ ಅಂತಾ ಕಾಮೆಂಟ್ ಮಾಡ್ತಿದ್ದಾರೆ. ಕಾಮೆಂಟ್‌ಗೆಲ್ಲಾ ಕ್ಯಾರೆ ಅನ್ನದೇ ನಟಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ ಅನನ್ಯಾ ಮಿಂಚಿಂಗ್, ಬಾಯ್‌ಫ್ರೆಂಡ್ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

ಸ್ವಪ್ನ ಕೃಷ್ಣ ಅವರ ‘ಅಂತರಪಟʼ (Antarapata) ಸೀರಿಯಲ್‌ನಲ್ಲಿ ಅತಿಥಿಯಾಗಿ ನಟಿ ಕಾಣಿಸಿಕೊಂಡಿದ್ದರು. ಪವರ್‌ಫುಲ್ ರೋಲ್‌ನಲ್ಲಿ ಮಿಂಚಿದ್ದರು. ಈಗ ಹೊಸ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಬೆಳಗಲು ಸಜ್ಜಾಗುತ್ತಿದ್ದಾರೆ. ಪಾಯಲ್ ಎಂಬ ಪಾತ್ರದ ಮೂಲಕ ಬರಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article