ಪತ್ನಿಯ ಕಣ್ಣೆದುರೇ ಗಂಡನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಐನಾತಿ ಹೆಂಡತಿ ಅರೆಸ್ಟ್

Public TV
2 Min Read
murder belagavi

ಬೆಳಗಾವಿ: ಅಮವಾಸ್ಯೆ ಹಿನ್ನೆಲೆ ಗಂಡನೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಪತ್ನಿ (Wife) ಎದುರೇ ಗಂಡನ (Husband) ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಐನಾತಿ ಹೆಂಡತಿ ಪ್ರಿಯಾಂಕಾ ಜಗಮತ್ತಿಯನ್ನ ಮೂಡಲಗಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಸೋಮವಾರ ಭೀಮನ ಅಮವಾಸ್ಯೆಯಾಗಿದ್ದರಿಂದ ಶಂಕರ್ ಜಗಮತ್ತಿ ಮತ್ತು ಪ್ರಿಯಾಂಕಾ ಜಗಮತ್ತಿ ದಂಪತಿ ಮೂಡಲಗಿ (Mudalagi) ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ (Banasiddeshwara Temple) ಬಂದಿದ್ದರು. ಈ ವೇಳೆ ಪತ್ನಿಯ ಕಣ್ಣೆದುರೇ ದುಷ್ಕರ್ಮಿಗಳು ಪತಿಯ ಹತ್ಯೆ ಮಾಡಿದ್ದು, ಸ್ಥಳದಲ್ಲೇ ಶಂಕರ್ ಜಗಮತ್ತಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌; 4 ಉಗ್ರರ ಹತ್ಯೆ

murder belagavi 1

ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್ ತಳವಾರ(21), ಶಂಕರ್ ಪತ್ನಿ ಪ್ರಿಯಾಂಕ ಜಗಮತ್ತಿಯನ್ನು (21) ಬಂಧಿಸಲಾಗಿದೆ. ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಪ್ರಿಯಾಂಕಾ ಮನೆ ಬಿಡುವ ವೇಳೆ ಪ್ರಿಯಕರ ಶ್ರೀಧರ್‌ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು. ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಬರುತ್ತಿದ್ದಂತೆ ಆರೋಪಿ ಶ್ರೀಧರ್ ಪ್ರಿಯಾಂಕಾ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಕೋಳಿ ರಕ್ತ ಗುಪ್ತಾಂಗಕ್ಕೆ ಹಚ್ಚಿಕೊಂಡು ಉದ್ಯಮಿ ವಿರುದ್ಧ ಸುಳ್ಳು ರೇಪ್‌ ಕೇಸ್‌ – ಕಿಲಾಡಿ ಲೇಡಿ ಗ್ಯಾಂಗ್‌ ಅರೆಸ್ಟ್‌

ಇತ್ತ ಏನು ಗೊತ್ತಿಲ್ಲದಂತೆ ನಾಟಕ ಆಡಿದ್ದ ಪ್ರಿಯಾಂಕಾ ಬೈಕ್ ತನ್ನಿ ಎಂದು ದೂರದಲ್ಲಿ ನಿಂತಿದ್ದಳು. ಕೊಲೆ ಬಳಿಕ ಏನೂ ಗೊತ್ತಿಲ್ಲದಂತೆ ಸುಪನಾತಿ ಹೆಂಡತಿ ಭರ್ಜರಿ ನಾಟಕ ಆಡಿದ್ದಳು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಶ್ರೀಧರ್ ಮತ್ತು ಪ್ರಿಯಾಂಕಾ ನಡುವೆ ಸಂಬಂಧ (Relationship) ಇರುವುದು ಬೆಳಕಿಗೆ ಬಂದಿದೆ. ಈ ವೇಳೆ ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್ ಹೀಗೆ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಪ್ರಿಯಾಂಕಾಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಗನ ಮೇಲೆಯೇ ಪೆಟ್ರೋಲ್ ಎರಚಿ ಸುಟ್ಟು ಹಾಕಿದ ತಾಯಿ!

ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏಕಾಏಕಿ ರೂಮ್ ಲಾಕ್ ಮಾಡ್ಕೊಂಡು ಮಹಿಳಾ ಟೆಕ್ಕಿ ನೇಣಿಗೆ ಶರಣು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article