‘ಪಠಾಣ್’ ಕಲೆಕ್ಷನ್ ವಿಚಾರದಲ್ಲಿ ಶಾರುಖ್ ಸುಳ್ಳು ಹೇಳಿದ್ರಾ?: ಪ್ರಶ್ನೆ ಮಾಡಿದ ನಟಿ ಕಾಜೋಲ್

Public TV
2 Min Read
shaharukh khan 1

ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡು ಬಾಲಿವುಡ್ (Bollywood) ಅನ್ನು ಸೋಲಿನ ಗಡಿಯಿಂದ ಆಚೆ ತಂದಿತ್ತು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ. ಸ್ವತಃ ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅದು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹಲವು ವರ್ಷಗಳ ಸೋಲಿನ ನಂತರ ಶಾರುಖ್ ಮತ್ತೆ ಪುಟಿದೆದ್ದಿರು. ಅಭಿಮಾನಿಗಳು ಕೂಡ ಸಂಭ್ರಮಿಸಿದ್ದರು. ಸದ್ಯ ಶಾರುಖ್ ಮತ್ತೊಂದು ಸಿನಿಮಾದ ರಿಲೀಸ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕಲೆಕ್ಷನ್ ಬಗ್ಗೆ ಖ್ಯಾತ ಬಾಲಿವುಡ್ ನಟಿ ಕಾಜೋಲ್ (Kajol) ಅನುಮಾನ ವ್ಯಕ್ತ ಪಡಿಸಿದ್ದಾರೆ.

Pathan

ಮಾಧ್ಯಮವೊಂದರ ಸಂದರ್ಶನದಲ್ಲಿ ನಿರೂಪಕರು ‘ಶಾರುಖ್ ಖಾನ್ ಅವರಿಗೆ ಏನಾದರೂ ಕೇಳಬೇಕು ಅಂತ ನಿಮಗೆ ಅನಿಸ್ತಿದ್ಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಕೊಂಚ ಯೋಚನೆ ಮಾಡುವ ಕಾಜೋಲ್, ‘ಈವರೆಗೂ ಅವರ ಬಗ್ಗೆ ಎಲ್ಲವೂ ಇಂಟರ್ ನೆಟ್ ನಲ್ಲಿ ಇದೆ. ಒಂದೇ ಒಂದು ಪ್ರಶ್ನೆ  ಕೇಳುವುದಾದರೆ, ಪಠಾಣ್ ಸಿನಿಮಾ ನಿಜವಾಗಿಯೂ ಕಲೆಕ್ಷನ್ (Collection) ಎಷ್ಟು ಮಾಡಿತು? ಎನ್ನುತ್ತಾರೆ. ನಂತರ ವ್ಯಂಗ್ಯವಾಗಿ ಅವರು ನಗುತ್ತಾರೆ.

pathan 2

ಕಾಜೋಲ್ ಕೇಳಿದ ಈ ಪ್ರಶ್ನೆಗೆ ಶಾರುಖ್ ಅಭಿಮಾನಿಗಳು ಗರಂ ಆಗಿದ್ದಾರೆ. ಶಾರುಖ್ ಬಗ್ಗೆ ಕಾಜೋಲ್ ಗೆ ಏಕೆ ಅನುಮಾನ? ಅವರು ಸುಳ್ಳು ಹೇಳಿದ್ದಾರೆ ಅಂತಾನಾ? ಏನು ಅವರ ಮಾತಿನ ಧಾಟಿ ಎಂದು ಹರಿಹಾಯ್ದಿದ್ದಾರೆ. ಕಾಜೋಲ್ ಈ ರೀತಿ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ಬಾಲಿವುಡ್ ನಟಿಯಾಗಿ ಸುಮ್ಮನಿರಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

pathan 1

ಕಡಿಮೆ ದಿನದಲ್ಲೇ ಸಾವಿರ ಕೋಟಿ ದಾಟಿದ ಪಠಾಣ್

ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿತ್ತು. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

Pathan

ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ.

vivek with pathan

ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ.

 

ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೆಲ್ಲದರ ಪರಿಣಾಮ ಇದೀಗ ಪಠಾಣ್ ಸಾವಿರ ಕೋಟಿ ಬಾಚಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article