ಮಂಗಳೂರು: ಅಂಗಡಿ ಮಾಲೀಕನೊಬ್ಬ (Shop Owner) ತನ್ನ ಕಾರ್ಮಿಕನನ್ನೇ (Labourer) ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.
ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ಘಟನೆ ನಡೆದಿದೆ. ಉತ್ತರ ಭಾರತ ಮೂಲದ ಗಜ್ಞಾನ್ ಜಗು ಕೊಲೆಯಾದ ವ್ಯಕ್ತಿಯಾಗಿದ್ದು, ಆತನನ್ನು ಅಂಗಡಿ ಮಾಲೀಕ ತೌಸಿಫ್ ಹುಸೈನ್ ಬೆಂಕಿ ಹಚ್ಚಿ ಕೊಂದಿದ್ದಾನೆ.
ಆರೋಪಿ ಜನರಲ್ ಸ್ಟೋರ್‌ನ ಮಾಲೀಕನಾಗಿದ್ದು, ಕಾರ್ಮಿಕನನ್ನು ಕೊಂದ ಬಳಿಕ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾನೆ. ಆದರೆ ವೈದ್ಯರು ಆತನನ್ನು ಪರೀಕ್ಷಿಸಿದಾಗ ಗಜ್ಞಾನ್ ಮೃತಪಟ್ಟಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಕರೆಂಟ್ ಶಾಕ್ ಕೊಟ್ಟು, ಕತ್ತು ಹಿಸುಕಿ ಜೈನಮುನಿ ಹತ್ಯೆ – ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಆರೋಪಿ ಬಳಿಕ ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಸಾವನ್ನಪ್ಪಿರುವುದಾಗಿ ಪೊಲೀಸರಿಗೆ ದೂರು ನೀಡಿ ಘಟನೆಯನ್ನು ತಿರುಚಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಅಂಗಡಿ ಮಾಲೀಕನ ಮೇಲೆಯೇ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಸಂಚು ಬಯಲಾಗಿದೆ.
ಘಟನೆ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತೌಸಿಫ್ ಹುಸೈನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದಲಿತನ ಮೇಲೆ ಹಲ್ಲೆ – ಚಪ್ಪಲಿ ನೆಕ್ಕಿಸಿ ವಿಕೃತಿ ಮೆರೆದ ದುರುಳ
Web Stories