– ಯಾವುದಕ್ಕೆ ಎಷ್ಟು ಬೆಲೆ ಏರಿಕೆ..?
ಬೆಂಗಳೂರು: ಎಣ್ಣೆ ಪ್ರಿಯರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇನ್ನೊಂದು ವಾರದಲ್ಲಿ ಮದ್ಯಪಾನದ ದರದಲ್ಲಿ (Alcohol Rate) ಏರಿಕೆಯಾಗಲಿದೆ.
ಅಬಕಾರಿ ಶುಂಕ 20% ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಇನ್ನು ಮುಂದೆ ಬ್ರಾಂಡೆಡ್ ಮದ್ಯಗಳು ದುಬಾರಿಯಾಗಲಿದೆ. ಈಗಾಗಲೇ ಹೊಸ ದರ ಪಟ್ಟಿಯನ್ನು ಅಬಕಾರಿ ಇಲಾಖೆ ಬಿಡುಗಡೆ ಮಾಡಿದ್ದು, ಇದರ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬ್ಲಾಕ್ & ವೈಟ್: ಹಿಂದಿನ ಬೆಲೆ 2,464- ಏರಿಕೆ ಬೆಲೆ – 2,800
ಜಾನಿ ವಾಕರ್ ಬ್ಲಾಕ್ ಲೇಬಲ್: ಹಿಂದಿನ ಬೆಲೆ – 6,250, ಏರಿಕೆ ಬೆಲೆ – 7,150
ಚಿವಾಸ್ ರೀಗಲ್: ಹಿಂದಿನ ಬೆಲೆ – 6,200, ಏರಿಕೆ ಬೆಲೆ – 7,000
ಟೀಚರ್ಸ್ (750 ML): ಹಿಂದಿನ ದರ – 2,451, ಏರಿಕೆ ದರ – 2,800
ಬ್ಲಾಕ್ & ವೈಟ್ (750 ML): ಹಿಂದಿನದರ – 2,415, ಏರಿಕೆ ದರ – 2, 800
ರೊಮನೊವಾ ವೋಡ್ಕಾ: ಹಿಂದಿನ ಬೆಲೆ – 915, ಏರಿಕೆ ಬೆಲೆ – 1,000
ಬ್ಯಾಗ್‌ಪೈಪರ್: ಹಿಂದಿನ ಬೆಲೆ – 106, ಏರಿಕೆ ಬೆಲೆ – 120
ಬಿಯರ್ ಗಳ ಮೇಲೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತಿದೆ. ತೆರಿಗೆ ಹೆಚ್ಚಳದಿಂದ ಬಿಯರ್ ಗಳೂ (Beer Price) ದುಬಾರಿಯಾಗಲಿದ್ದು, ಕನಿಷ್ಠ 20 ರೂ. ಹೆಚ್ಚಳ ಮಾಡಲಾಗುತ್ತಿದೆ. ಕಿಂಗ್‍ಫಿಷರ್ (King Fisher) ಬೆಲೆ 170 ಇದ್ದಿದು 190 ರೂ., ಬಡ್ ವೈಸರ್ (Budweiser) ಬೆಲೆ 220 ಇದ್ದಿದ್ದು 240 ರೂ., ಟ್ಯೂಬರ್ಗ್ ( Tuborg) ಬೆಲೆ 170 ಇದ್ದಿದ್ದು 190 ರೂ. ಹಾಗೂ ಕಾರ್ಲ್ಸ್ ಬರ್ಗ್ ಬೆಲೆ 220 ಇದ್ದಿದ್ದು 250 ರೂ. ಆಗಲಿದೆ.
ಅಬಕಾರಿ ಶುಂಕ ಹೆಚ್ಚಳದಿಂದ ಮದ್ಯ ದುಬಾರಿಯಾಗಲಿದೆ. ಹೀಗಾಗಿ ಇನ್ನೊಂದು ವಾರದ ಬಳಿಕ ದರ ಏರಿಕೆಯಾಗಲಿದೆ. 4-5 ದಿನ ಅಥವಾ ವಾರದಲ್ಲಿ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಸರ್ಕಾರ ಅನುಮೋದನೆ ಬಳಿಕ ಹೊಸ ದರ ಜಾರಿಗೊಳಿಸಲಾಗುವುದು ಎಂದು ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]