ಬೋಲ್ಡ್ ಡ್ರೆಸ್ಸಿಂಗ್ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್

Public TV
2 Min Read
urfi javed 2

ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಮೂಡಿಸಿದ ನಟಿ ಉರ್ಫಿ ಜಾವೇದ್ (Urfi Javed) ಅವರು ತಾವು ಧರಿಸುವ ಚಿತ್ರ-ವಿಚಿತ್ರ ಬಟ್ಟೆಯಿಂದಲೇ ಗುರುತಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕೆಟ್ಟ ಕಾಮೆಂಟ್ಸ್‌ಗೆ ಡೊಂಟ್ ಕೇರ್ ಎನುತ್ತಾ ಸದಾ ಮೈ ಕಾಣುವ ಬಟ್ಟೆಗಳನ್ನೇ ಸದಾ ಧರಿಸುವ ಉರ್ಫಿ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದುಯಿದೆ. ಇದೀಗ ಅವರು ಯಾಕೆ ಹೀಗೆ ವಿಚಿತ್ರ ಬಟ್ಟೆಗಳನ್ನೇ ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

urfi javed 3

ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ನಟಿ ಉರ್ಫಿ ಸಿನಿಮಾ ಮಾಡೋದ್ದಕ್ಕಿಂತ, ಟ್ರೋಲ್ ಮತ್ತು ಬಟ್ಟೆಯಿಂದಲೇ ಸಖತ್ ಸೌಂಡ್ ಮಾಡಿದ್ದಾರೆ. ಕೆಲದಿನಗಳ ಹಿಂದೆ ಮುಂಬೈ ಮನೆ ಬಾಡಿಗೆ ಕೊಡ್ತಿಲ್ಲ ನನಗೆ ಎಂದು ಉರ್ಫಿ ಗೋಗರೆದಿದ್ದರು. ಬಳಿಕ ತನಗೆ ಸಿನಿಮಾ ಆಫರ್ಸ್ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಸದಾ ಭಿನ್ನವಾಗಿರುವ ಧರಿಸಿನೊಂದಿಗೆ ಅಭಿಮಾನಿಗಳ ಮುಂದೆ ಬರುವ ಉರ್ಫಿ ಜಾವೇದ್ ಇಷ್ಟೊಂದು ಬೋಲ್ಡ್ ಆಗಿರೋದೇಕೆ ಎಂದು ಸಂದರ್ಶನವೊಂದರಲ್ಲಿ ನಟಿ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ನೀಲಿ ತಾರೆ ಮಿಯಾ ತೆಲುಗಿನ ಡೈರೆಕ್ಟರ್ ಆರ್‌ಜಿವಿ

Urfi Javed 2

ಬಿಗ್ ಬಾಸ್ ಒಟಿಟಿಯಿಂದ (Bigg Boss Ott) ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ‘ಹೌಸ್ ಅರೆಸ್ಟ್’ (House Arrest) ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್ ನಲ್ಲಿಯೂ ಅವರು ಭಾಗವಹಿಸಿದ್ದರು. ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಹಾಗಾಗಿ ನಟಿ ನಿರಂತರವಾಗಿ ಟ್ರೋಲ್ ಆಗ್ತಿರೋದರ ಬಗ್ಗೆ ಮಾತನಾಡಿದ್ದಾರೆ.

ಉರ್ಫಿ, ಕೆಲವು ಜನರು ನನ್ನನ್ನು ಗೌರವಿಸುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಲು ಯಾರೂ ಬಯಸುವುದಿಲ್ಲ. ನಾನು ಎಲ್ಲರ ಗಮನ ಸೆಳೆಯುವ ಸಲುವಾಗಿಯೇ ಈ ರೀತಿಯ ಬಟ್ಟೆಗಳನ್ನು ಧರಿಸುವುದು ಎಂದು ಉರ್ಫಿ ಒಪ್ಪಿಕೊಂಡಿದ್ದಾರೆ. ಆದರೆ ಈ ಕುರಿತು ಕಾಮೆಂಟ್ ಮಾಡಿದರೆ ನನಗೆ ಇಷ್ಟ ಆಗುವುದಿಲ್ಲ ಎಂದು ನಟಿ ಮಾತನಾಡಿದ್ದಾರೆ.

Share This Article