ಮೀಟೂ ಆರೋಪದ ಮೂಲಕ ಬಾಲಿವುಡ್ (Bollywood) ಗೆ ಬೆಂಕಿ ಹಚ್ಚಿದ್ದ ನಟಿ ಪಾಯಲ್ ಘೋಷ್ (Payal Ghosh) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಮೀಟೂ (Metoo) ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪಾಯಲ್, ‘ಬಾಲಿವುಡ್ ಟಾಪ್ ನಿರ್ದೇಶಕರೊಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದು ಅವರು ಆರೋಪ (Allegation) ಮಾಡಿದ್ದರು.
ಇದೀಗ ಪಾಯಲ್ ಘೋಷ್ 11ನೇ ಸಿನಿಮಾವನ್ನು ಮುಗಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಖುಷಿಯ ಜೊತೆಗೆ ಕಹಿ ಮಾತುಗಳನ್ನೂ ಆಡಿದ್ದಾರೆ. ಕೇಳಿದವರೊಟ್ಟಿಗೆ ನಾನು ಮಲಗಿದ್ದರೆ, ನನ್ನ ದೇಹವನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗೆ 30 ಚಿತ್ರಗಳನ್ನು ಮಾಡಿರುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ಸಿನಿಮಾ ರಂಗದ ಕರಾಳ ಮುಖವನ್ನು ಆಗಾಗ್ಗೆ ಬಿಚ್ಚಿಡುವ ಪಾಯಲ್, ಈ ಹಿಂದೆ ಅನೇಕ ನಿರ್ದೇಶಕರ ಮತ್ತು ನಿರ್ಮಾಪಕರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕೆಲವು ನಟಿಯರ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ದೇಹ ಹಂಚಿಕೊಂಡೆ ಪಾತ್ರಗಳನ್ನು ಪಡೆಯುವ ನಟಿಯರೂ ಇದ್ದಾರೆ ಎಂದು ನೇರವಾಗಿಯೇ ಮಾತನಾಡಿದ್ದರು. ಆಗಲೂ ಕೂಡ ಇವರ ಮಾತು ಅಷ್ಟೇ ಸದ್ದು ಮಾಡಿತ್ತು. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್
ಈ ಬಾರಿಯ ಕಾಮೆಂಟ್ ಗೂ ಅಷ್ಟೇ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾರೆಲ್ಲ ನಟಿಯರು ಹೀಗೆ ಅವಕಾಶ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿ ಎಂದು ಕೆಲವರು ಕೇಳಿದ್ದಾರೆ. ಅಲ್ಲದೇ, ನಿಮ್ಮನ್ನು ಯಾರೆಲ್ಲ ಮಲಗಲು ಕರೆದಿದ್ದಾರೆ ಎನ್ನುವುದನ್ನು ತಿಳಿಸಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಪಾಯಲ್ ಘೋಷ್ ಸಿನಿಮಾ ರಂಗದ ಬಗ್ಗೆ ಆಗಾಗ್ಗೆ ಈ ರೀತಿಯ ಬಾಂಬ್ ಗಳನ್ನು ಸಿಡಿಸುತ್ತಲೇ ಇರುತ್ತಾರೆ. ಒಂದಷ್ಟು ಬಾರಿ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡರೆ, ಮತ್ತಷ್ಟು ಬಾರಿ ನೆಗ್ಲೆಟ್ ಮಾಡಲಾಗುತ್ತದೆ. ಆದರೂ, ಅವರು ಹೇಳುವುದನ್ನು ನಿಲ್ಲಿಸುವುದಿಲ್ಲ. ಸಿನಿಮಾ ರಂಗ ಮತ್ತು ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಪಾಯಲ್, ಬೋಲ್ಡ್ ಫೋಟೋ ಶೂಟ್ ಮೂಲಕವೂ ಸುದ್ದಿಯಲ್ಲಿರುತ್ತಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]