ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳು ಬಸ್ಸನ್ನು ಕಿಟಕಿಯಿಂದೇರಿ ಇಳಿಯುವಂತಾಗಿದೆ: ಛಲವಾದಿ ನಾರಾಯಣಸ್ವಾಮಿ

Public TV
1 Min Read
Chalavadi Narayanaswamy

– ಬಹುಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಈಗ ಮೋದಿ ಎದುರಿಸೋ ಶಕ್ತಿ ಇಲ್ಲ

ಬೆಳಗಾವಿ: ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸಿದರೆ ಸಾಕು. ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗುವುದನ್ನು ತಡೆಯಲು ವಿಪಕ್ಷಗಳು ತಾಲೀಮು ನಡೆಸುತ್ತಿವೆ. ಬಹುಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ಗೆ (Congress) ಈಗ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಇಲ್ಲ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.

ಬೆಳಗಾವಿಯ (Belagavi) ಗಾಂಧಿ ಭವನದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾಗಿದ್ದರೂ ಪ್ರಾದೇಶಿಕ ಪಕ್ಷದ ಸಭೆಗೆ ಕಾಂಗ್ರೆಸ್ ನಾಯಕರು ಹೊಗಿದ್ದಾರೆ. ವಿಪಕ್ಷಗಳು ಏನೇ ಕಸರತ್ತು ಮಾಡಲಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಅಧಿಕಾರಕ್ಕೆ ಬರುವುದಕ್ಕಾಗಿ ಕಾಂಗ್ರೆಸ್ 5 ಗ್ಯಾರಂಟಿ (Guarantee) ಯೋಜನೆ ಜಾರಿಗೆ ತಂದಿದೆ. ಹೆಣ್ಣು ಮಕ್ಕಳನ್ನು ಕೇಂದ್ರೀಕರಿಸಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಎಂದರು.

siddaramaiah chalavadi narayanaswamy

ಬೊಮ್ಮಾಯಿ ಸರ್ಕಾರದಲ್ಲಿ ರಾಜ್ಯದ ಹೆಣ್ಣು ಮಕ್ಕಳು ಬಸ್‌ನ (Bus) ಬಾಗಿಲಿನಿಂದ ಏರಿ, ಅಲ್ಲಿಂದಲೇ ಇಳಿಯುತ್ತಿದ್ದರು. ಸಿದ್ದರಾಮಯ್ಯನವರ ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳು ಕಿಟಕಿಯಿಂದ ಏರಿ, ಇಳಿಯುವಂತಾಗಿದೆ ಎಂದು ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಶಕ್ತಿಯೋಜನೆ ಬಗ್ಗೆ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಚಪ್ಪಲಿಯಿಂದ ಹೊಡೆದಾಡಿಕೊಳ್ತಾರೆ: ಯತ್ನಾಳ್

ಈಗ ಕಾಂಗ್ರೆಸ್ ಸರ್ಕಾರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಲೋಕಸಭೆ ಚುನಾವಣೆ ಕಡೆಗೆ ಗಮನ ಹರಿಸೋಣ. ರಾಜ್ಯ ಸರ್ಕಾರದ ಜುಟ್ಟು ನಮ್ಮ ಕೈಯಲ್ಲಿದೆ. ಲೋಕಸಭಾ ಚುನಾವಣೆ ಬಳಿಕ ಅದನ್ನು ಅಲ್ಲಾಡಿಸೋಣ. ಲೋಕಸಭಾ ಚುನಾವಣೆಗೆ ಪಕ್ಷ ಯಾರಿಗೆ ಟಿಕೆಟ್ ನೀಡಲಿ. ಅಭ್ಯರ್ಥಿ ನೋಡದೇ ಪಕ್ಷವನ್ನು ನೋಡಿ. ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಬೆಳಗಾವಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಇದನ್ನೂ ಓದಿ: ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗದ ಚೆಕ್ಕಿಂಗ್

Share This Article