ನಟಿಯೂ ಸೇರಿದಂತೆ ಯೂಟ್ಯೂಬರ್ಸ್ ಮನೆ ಮೇಲೆ ಐಟಿ ದಾಳಿ

Public TV
1 Min Read
Pearle Maaney 1

ಟಿ (IT) ಅಧಿಕಾರಿಗಳು ಯೂಟ್ಯೂಬರ್ಸ್ (YouTubers) ಮನೆ ಮೇಲೆ ದಾಳಿ ಮಾಡಿದ್ದು, ತೆರಿಗೆ ಕಟ್ಟದ ಯೂಟ್ಯೂಬರ್ಸ್ ಗೆ ಚಳಿ ಬಿಡಿಸಿದ್ದಾರೆ. ಅಲ್ಲದೇ, ಕೆಲವರಿಗೆ ನೋಟಿಸ್ ಕೂಡ ನೀಡಿದ್ದಾರೆ. ಈ ಯೂಟ್ಯೂಬರ್ಸ್ ಗಳಲ್ಲಿ ನಟಿ ಪರ್ಲಿ ಮಾನಿ (Pearle Maaney) ಕೂಡ ಇದ್ದಾರೆ.

Pearle Maaney 3

ಕೇರಳದ (Kerala) ಐಟಿ ಅಧಿಕಾರಿಗಳು ನಿನ್ನೆ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದು, ಕೇರಳದ ಪ್ರಸಿದ್ಧ ಯೂಟ್ಯೂಬರ್ಸ್ ಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿರುವ ಪ್ರಸಿದ್ದರ ಪೈಕಿ ನಟಿ ಪರ್ಲಿ ಮಾನಿ ಮನೆ ಕೂಡ ಇದೆ. ಪರ್ಲಿ ಕೇರಳದ ಪ್ರಸಿದ್ದ ನಟಿ, ನಿರೂಪಕಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

Pearle Maaney 2

ಕೇರಳದ ಪತ್ತನಂತಿಟ್ಟ, ತ್ರಿಶೂರ್, ಆಲಪ್ಪುಳ, ಎರ್ನಾಕುಳಂ, ಕೊಟ್ಟಾಯಂ ಹಾಗೂ ಕಾಸರಗೋಡು ಸೇರಿದಂತೆ ಹಲವು ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಜಿಎಸ್.ಟಿ ಪ್ರೊವಿಷನ್ ಪ್ರಕಾರ ಯೂಟ್ಯೂಬರ್ಸ್ ಅವರ ವಾರ್ಷಿಕ ಆದಾಯ 20 ಲಕ್ಷ ರೂಪಾಯಿಗೂ ಅಧಿಕ ಇದ್ದು, ಇವರು ಜಿಎಸ್ಟಿ ಕಾಯಿದೆ ಅಡಿ ದಾಖಲೆ ಮಾಡಿಕೊಳ್ಳಬೇಕಿತ್ತು.  ಶೇಕಡಾ 18ರಷ್ಟು ಜಿಎಸ್‌ಟಿ ಕಟ್ಟಬೇಕು. ಅದು ಆಗಿಲ್ಲ ಎನ್ನುವುದು ಅಧಿಕಾರಿಗಳ ಪ್ರತಿಕ್ರಿಯೆ.

ಪರ್ಲಿ ಮಾನಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಮೊದಲ ಸೀಸನ್ ರನ್ನರ್ ಅಪ್ ಕೂಡ. ಟಿವಿ ಕಾರ್ಯಕ್ರಮಗಳಲ್ಲೂ ನಿರೂಪಕಿ. ಅಲ್ಲದೇ ಅವರದ್ದೇ ಆದ ಯೂಟ್ಯೂಬ್ ಕೂಡ ಇದೆ. ಲಕ್ಷ ಲಕ್ಷ ಸಂಪಾದನೆ ಮಾಡುವ ನಟಿ ಜಿಎಸ್.ಟಿ ಪಾವತಿಸಿಲ್ಲ ಎಂದು ಹೇಳಲಾಗುತ್ತಿದೆ.

Share This Article