ಇತ್ತೀಚಿನ ದಿನಗಳಲ್ಲಿ ಯಶ್ (Yash) ಬಾಲಿವುಡ್ ಗೆ ಹೋಗಲಿದ್ದಾರೆ ಎನ್ನುವ ಸುದ್ದಿಯಿತ್ತು. ರಣವೀರ್ ಕಪೂರ್ (Ranveer Kapoor) ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲೂ ಯಶ್ ಬಾಲಿವುಡ್ (Bollywood) ಚಿತ್ರದಲ್ಲಿ ರಾವಣನಾಗಿ (Ravana) ಕಾಣಿಸಿಕೊಳ್ಳಲಿದ್ದಾರೆ ಎಂದೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕುರಿತು ಯಶ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮನೆ ದೇವರು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್, ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಬಾಲಿವುಡ್ ಗೆ ಹೋಗುವ ವಿಚಾರ ಕೂಡ ಬಂತು. ಅದಕ್ಕೆ ಪ್ರತಿಕ್ರಿಯೆ ನೀಡಿ ‘ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ’ ಎಂದರು ಯಶ್. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು
ರಾಕಿಂಗ್ ಸ್ಟಾರ್ (Rocking Star) ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಇಂದು ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು.
ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.
ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ ರಾಕಿಂಗ್ ಸ್ಟಾರ್.