ಪತ್ನಿಯನ್ನು ಅಪ್ಪಿಕೊಂಡು ಹೊಡೆದ ಗುಂಡು ತನಗೂ ಮುಳುವಾಯ್ತು- ದಂಪತಿ ಸಾವು

Public TV
1 Min Read
Uttar Pradesh 1

ಲಕ್ನೋ: ಪತ್ನಿಯ (Wife) ಮೇಲೆ ಹಾರಿಸಿದ ಗುಂಡು ತನಗೂ ತಗುಲಿ ದಂಪತಿ (Couple) ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ (Moradabad) ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ್ದ. ಅದೇ ಗುಂಡು ತನಗೂ ತಗುಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

police jeep

ಅನೇಕ್ ಪಾಲ್ (40) ಹಾಗೂ ಆತನ ಪತ್ನಿ ಸುಮನ್ ಪಾಲ್ (38) ಇಬ್ಬರೂ ಮೊಬೈಲ್ ಫೋನ್ ಕಳೆದು ಹೋಗಿದ್ದಕ್ಕಾಗಿ ಮಂಗಳವಾರ ಜಗಳವಾಡಿದ್ದರು. ಗಲಾಟೆ ತಿಳಿಯಾದ ಬಳಿಕ ಅನೇಕ್ ಪಾಲ್ ರಾತ್ರಿ ಪ್ರಾರ್ಥನೆ ಮುಗಿಸಿ ತನ್ನ ಪತ್ನಿಯ ಬಳಿಗೆ ಹೋಗಿದ್ದಾನೆ. ಏಕಾಏಕಿ ಪತ್ನಿಯನ್ನು ಅಪ್ಪಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಆದರೆ ಆತ ಪತ್ನಿಯನ್ನು ಅಪ್ಪಿಕೊಂಡಿದ್ದ ಕಾರಣ ಅದೇ ಗುಂಡು ಅನೇಕ್ ಪಾಲ್‌ನ ಎದೆಗೂ ತಗುಲಿದೆ. ಇದನ್ನೂ ಓದಿ: Biparjoy Cyclone ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾರೂ ಇಬ್ಬರೂ ಸಾವನ್ನಪ್ಪಿದ್ದಾರೆ. ಅನೇಕ್ ಪಾಲ್ ದೇಶೀಯ ನಿರ್ಮಿತ ಬಂದೂಕು ಬಳಸಿದ್ದು, ಅದನ್ನು ಆತ ಹೇಗೆ ಸಂಗ್ರಹಿಸಿದ್ದ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಗೆ ಒಂದು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಇದೀಗ ಹೆಚ್ಚಿನ ತನಿಖೆಗೆ ದಂಪತಿಯ ಕುಂಟುಂಬದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಯುವತಿ ಹತ್ಯೆಗೈದು ಕುತ್ತಿಗೆಯಲ್ಲಿ ಚಾಕು ಇಟ್ಟು ಸ್ಕೂಟಿ ಕೊಂಡೊಯ್ದರು!

Share This Article