ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

Public TV
2 Min Read
Upendra 2

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸದ್ಯ ‘ಕಬ್ಜ’ (Kabza) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ‘ಯುಐ’ (UI) ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಹೊಸ ಸಿನಿಮಾದ ಅಪ್‌ಡೇಟ್ ಮೂಲಕ ಸಿಹಿಸುದ್ದಿ ಸಿಕ್ಕಿದೆ. ಐತಿಹಾಸಿಕ ಸಿನಿಮಾ ಮಾಡಲು ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನಕದಾಸನಾಗಲು ಉಪ್ಪಿ ರೆಡಿಯಾಗಿದ್ದಾರೆ.

upendra 6

ಸದಾ ಭಿನ್ನ ಪಾತ್ರ, ವಿಭಿನ್ನ ಕಥೆಯನ್ನ ಆಯ್ಕೆ ಮಾಡೋದ್ರಲ್ಲಿ ನಟ ಉಪೇಂದ್ರ ಅವರು ಯಾವಾಗಲೂ ಮುಂದು. ಈಗಾಗಲೇ ನಾನಾ ಪಾತ್ರದ ಮೂಲಕ ಸಿನಿಮಾರಂಗದಲ್ಲಿ ಉಪೇಂದ್ರ ಅವರು ರಂಜಿಸಿದ್ದಾರೆ. ಹಾಗಾಗಿ ಈ ಬಾರಿ ಹಿಸ್ಟೋರಿಕಲ್ ಚಿತ್ರ ಮಾಡಲು ಉಪ್ಪಿ ಮನಸ್ಸು ಮಾಡಿದ್ದಾರೆ. ಕುಟುಂಬ, ಗೌರಮ್ಮ, ಗೋಕರ್ಣ, ದುಬೈ ಬಾಬು ಚಿತ್ರಗಳನ್ನ ಉಪ್ಪಿಗೆ ನಿರ್ದೇಶನ ಮಾಡಿದ್ದ ನಿರ್ದೇಶಕ ನಾಗಣ್ಣ ಈ ಹೊಸ ಚಿತ್ರಕ್ಕೆ ಡೈರೆಕ್ಷನ್ ಮಾಡ್ತಿದ್ದಾರೆ. ಈ ಮೂಲಕ 5ನೇ ಬಾರಿಗೆ ಉಪ್ಪಿ-ನಾಗಣ್ಣ (Naganna) ಒಂದಾಗುತ್ತಿದ್ದಾರೆ. ಇದನ್ನೂ ಓದಿ:8 ವರ್ಷದ ಪ್ರೀತಿಗೆ ಸೈನಿಕನ ಜೊತೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾದ ‘ಗಿಣಿರಾಮ’ ನಟಿ

upendra new film 1

ಈ ಚಿತ್ರದಲ್ಲಿ ಉಪೇಂದ್ರ ಕನಕದಾಸರ ಪಾತ್ರ ನಿರ್ವಹಿಸಲಿದ್ದು, ಕಥೆ ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಉಪೇಂದ್ರ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಲುಕ್ ಬದಲಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ 15ನೇ ಶತಮಾನದ್ದು. ಕನಕದಾಸರ ಸಿದ್ದಾಂತಗಳಿಂದ ಆದ ಪರಿಣಾಮಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತೆರೆಮೇಲೆ ತರಲು ಡೈರೆಕ್ಟರ್ ನಾಗಣ್ಣ ಸಜ್ಜಾಗಿದ್ದಾರೆ. ಈ ಸಿನಿಮಾಗೆ ಖ್ಯಾತ ಚಿತ್ರಕಥೆಗಾರ ಜಿ.ಕೆ. ಭಾರವಿ ಚಿತ್ರಕಥೆ ಬರೆದಿದ್ದಾರೆ. ಹಂಸಲೇಖ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈಗ ಕೆಲಸ ಆರಂಭಿಸಿದ್ದಾರೆ.

UPENDRA 1

ಈ ಸಿನಿಮಾದ ಕಥೆ ಮುಖ್ಯವಾಗಿ ಕನಕದಾಸರ ಬಗ್ಗೆ ಇದ್ದು, ಉಪೇಂದ್ರ ಅವರು ಕನಕದಾಸರಾಗಲಿದ್ದಾರೆ. ಈಗಾಗಲೇ ನಾವು ರಿಸರ್ಚ್ ವರ್ಕ್ ಮಾಡಿ ಕೆಲಸ ಆರಂಭಿಸಿಲಿದ್ದೇವೆ. ಉಪ್ಪಿ ಅವರು ಸಹ ಕಥೆ ಕೇಳಿ ಥ್ರಿಲ್ ಆಗಿದ್ದರೆ. ಎರಡು ಶೇಡ್‌ನಲ್ಲಿ ಅವರ ಪಾತ್ರ ಇರಲಿದೆ ಎಂದು ನಿರ್ದೇಶಕ ನಾಗಣ್ಣ ಮಾಹಿತಿ ನೀಡಿದ್ದಾರೆ.

ಕನಕದಾಸರ ಐತಿಹಾಸಿಕ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆ ‘ಎ’ ಚಿತ್ರ ನಿರ್ಮಿಸಿದ್ದ ಜಗನ್ನಾಥ್ ಅವರು ಉಪ್ಪಿ ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಉಪ್ಪಿ ಜೊತೆ ಯಾರೆಲ್ಲಾ ನಟಿಸುತ್ತಾರೆ? ಶೂಟಿಂಗ್ ಯಾವಾಗ ಈ ಎಲ್ಲಾ ಮಾಹಿತಿಗಾಗಿ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Share This Article