ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

Public TV
2 Min Read
Bengaluru Murder

ಆನೇಕಲ್: ದೆಹಲಿಯಲ್ಲಿ ಶ್ರದ್ಧಾವಾಕರ್ (Shraddha Walker) ಹಾಗೂ ಮುಂಬೈನಲ್ಲಿ ಸರಸ್ವತಿ ವೈದ್ಯ ಹತ್ಯೆ ಪ್ರಕರಣದ ಮಾದರಿಯಲ್ಲೇ ಈಗ ಬೆಂಗಳೂರಿನಲ್ಲೊಂದು ಕೊಲೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಬಿಹಾರದಿಂದ ಬೆಂಗಳೂರಿಗೆ (Bengaluru) ಬಂದಿದ್ದ ಯುವಕರು, ಆಸ್ತಿಗಾಗಿ ಮಹಿಳೆಯನ್ನ ಕೊಲೆ ಮಾಡಿ ದೇಹವನ್ನ ಪೀಸ್ ಪೀಸ್ ಮಾಡಿ ಎಸೆದು ಪರಾರಿಯಾಗಿರುವ ಘಟನೆ ಆನೇಕಲ್ ಉಪವಿಭಾಗದ ಬನ್ನೇರುಘಟ್ಟ ಪೋಲೀಸ್ ಠಾಣಾ (Bannerghatta Police Station) ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ಪೈಕಿ ಇಂದಲ್ ಕುಮಾರ್ (21) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮೃತ ಮಹಿಳೆಯನ್ನು ಗೀತಾ (54) ಎಂದು ಗುರುತಿಸಲಾಗಿದೆ.

Bengaluru Murder 2

ಜೂನ್ 1ರಂದು ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡಿದ್ದ ಬನ್ನೇರುಘಟ್ಟ ಪೊಲೀಸರು ಹಂತಕರನ್ನ ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಿತ್ತು. ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಓರ್ವನ ಬಂಧನವಾಗಿದೆ. ಇದನ್ನೂ ಓದಿ: ದೇಶದ ಕೋಟ್ಯಂತರ ಜನ ಗಡ್ಡ ಬಿಟ್ಟಿದ್ದಾರೆ, ಅವರೆಲ್ಲ ಲಾಡೆನ್ ಆಗುತ್ತಾರಾ? – ಬಿಜೆಪಿಗೆ ಮನೋಜ್ ಝಾ ಪ್ರಶ್ನೆ

Bengaluru Murder 1

ಏನಿದು ಕ್ರೈಂ ಸ್ಟೋರಿ?
ಬಿಹಾರದಿಂದ ಬಂದಿದ್ದ ಯುವಕರು ಕೊಲೆಯಾದ ಮಹಿಳೆ (Women) ಗೀತಾ ಮನೆಯಲ್ಲೇ ಬಾಡಿಗೆಗೆ ಇದ್ದರು. ಕೊನೆಗೆ ಮನೆಯನ್ನು ತಮ್ಮ ಹೆಸರಿಗೇ ಮಾಡಿಕೊಡುವಂತೆ ಆಕೆಯನ್ನ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದೇ ಇದ್ದದ್ದಕ್ಕೆ ಕೊಲೆ ಮಾಡಿದ್ದಾರೆ. ಈ ವಿಚಾರ ಹೊರಗೆ ತಿಳಿಯದಂತೆ ನೋಡಿಕೊಳ್ಳಲು ದೇಹವನ್ನ ತುಂಡರಿಸಿದ್ದಾರೆ. ಮೃತದೇಹದ ಭಾಗಗಳನ್ನ ತುಂಡು ತುಂಡಾಗಿ ಕತ್ತರಿಸಿ ಅಲ್ಲಲ್ಲಿ ಎಸೆದಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ಕತ್ತರಿಸಿದ ಭಾಗಗಳನ್ನ ತುಂಬಿ ಬೇರೆಡೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’

Bengaluru Murder 3

ಮಹಿಳೆಯನ್ನು ಕೊಲೆ ಮಾಡಿದ ನಂತರವೂ ಏನೂ ಆಗಿಲ್ಲವೆನ್ನುವಂತೆ ಆರೋಪಿಗಳು ಒಂದು ದಿನ ಕೆಲಸಕ್ಕೆ ತೆರಳಿದ್ದರು. ಅವರಲ್ಲಿಬ್ಬರು ಕಿರಾತಕರು ಶವದ ಮುಂದೆಯೇ ಕುಳಿತು ಊಟ ಮಾಡುತ್ತಿದ್ದರು. ಕೃತ್ಯ ನಡೆದ ಮೂರು ದಿನಗಳ ಬಳಿಕ ದುರ್ವಾಸನೆ ಬೀರುತ್ತಿದ್ದಂತೆ ಆತಂಕಗೊಂಡ ಆರೋಪಿಗಳು ಮನೆಯ ಹಿಂಭಾಗ ದೇಹದ ಭಾಗಗಳನ್ನ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಅದರಲ್ಲಿ ಮಹಿಳೆಯ ತಲೆ ಮತ್ತು ಒಂದು ಕೈ 1 ಕಿಮೀ ದೂರದಲ್ಲಿ ಪತ್ತೆಯಾದರೆ, ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಪತ್ತೆಯಾಗಿದೆ.

ಕೃತ್ಯಕ್ಕೂ ಮುನ್ನ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ಸಹ ನಡೆಯುತ್ತಿದೆ. ಸದ್ಯದಲ್ಲೇ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಪರಿಶೀಲನೆ ಮಾಡಲಿದ್ದಾರೆ. ಒಟ್ಟಿನಲ್ಲಿ ಈ ಕೊಲೆ ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕಾಗಿಯೇ ನಡೆದಿರುವುದು ಕಂಡುಬಂದಿದೆ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್, ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿದ್ದಾರೆ.

Share This Article