ಪಟ್ನಾ: ದೇಶದಲ್ಲಿ ಕೋಟ್ಯಂತರ ಜನ ಗಡ್ಡ ಬಿಟ್ಟಿದ್ದಾರೆ. ಅವರೆಲ್ಲ ಒಸಾಮಾ ಬಿನ್ ಲಾಡೆನ್ ಆಗುತ್ತಾರಾ ಎಂದು ರಾಷ್ಟ್ರೀಯ ಜನತಾ ದಳದ (Rashtriya Janata Dal) ಸಂಸದ ಮನೋಜ್ ಝಾ (Manoj Jha) ಬಿಜೆಪಿಯನ್ನು (BJP) ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಕುರಿತು ಬಿಹಾರ (Bihar) ರಾಜ್ಯದ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನೀವು ರಾಹುಲ್ ಅವರನ್ನು ವಿರೋಧಿಸುವುದಾದರೆ ರಾಜಕೀಯ ಚೌಕಟ್ಟಿನಲ್ಲಿ ವಿರೋಧಿಸಬೇಕು. ಆದರೆ ನೀವು ಗೋಡ್ಸೆಯನ್ನು ದೇಶದ ಶ್ರೇಷ್ಠ ಪುತ್ರ ಎಂದ ಗಿರಿರಾಜ್ ಸಿಂಗ್ ಅವರೊಂದಿಗೆ ಪೈಪೋಟಿಗಿಳಿದಿದ್ದೀರಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅರೆಸ್ಟ್
Advertisement
Advertisement
ಇತ್ತೀಚೆಗೆ ಸಾಮ್ರಾಟ್ ಚೌಧರಿಯವರು, ಒಸಾಮಾ ಬಿನ್ ಲಾಡೆನ್‍ನಂತೆ ರಾಹುಲ್ ಗಾಂಧಿ ಅವರು ಗಡ್ಡ ಬೆಳೆಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ಪ್ರಧಾನಿ ನರೇಂದ್ರ ಮೋದಿಯಂತೆ (Narendra Modi) ಭಾವಿಸಿಕೊಂಡಿದ್ದಾರೆ. ರಾಹುಲ್ ಇನ್ನೂ ಬೆಳವಣಿಗೆ ಹೊಂದದ ಮಗು. ಅವರಿಗೆ ರಾಜಕೀಯ ತಿಳುವಳಿಕೆ ಇಲ್ಲ ಎಂದು ಲೇವಡಿ ಮಾಡಿದ್ದರು.
Advertisement
Advertisement
ರಾಹುಲ್‍ಗಾಂಧಿಯವರ ಗಡ್ಡದ ವಿಚಾರವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಹ ಕಳೆದ ನವೆಂಬರ್‌ನಲ್ಲಿ ಟೀಕಿಸಿದ್ದರು. ನೀವು ನಿಮ್ಮ ಲುಕ್ ಬದಲಾಯಿಸಬೇಕಾದರೆ, ಕನಿಷ್ಠ ಅದನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಥವಾ ಜವಾಹರಲಾಲ್ ನೆಹರೂ ರೀತಿಯಲ್ಲಿ ಇರಬೇಕು. ಗಾಂಧೀಜಿಯಂತೆ ಕಂಡರೆ ಉತ್ತಮ. ಆದರೆ ನಿಮ್ಮ ಮುಖ ಸದ್ದಾಂ ಹುಸೇನ್ ರೀತಿಯಲ್ಲಿ ಕಾಣುತ್ತಿದೆ ಎಂದಿದ್ದರು. ಇದನ್ನೂ ಓದಿ: ತಾಯಿಯನ್ನು ನೋಡದೆ 32 ಆಯ್ತು, ತಂದೆಯ ಕೊನೆಗಾಲದಲ್ಲಿ ಜೊತೆ ಇರಲು ಆಗಲಿಲ್ಲ- ರಾಜೀವ್ ಗಾಂಧಿ ಹಂತಕನ ಭಾವನಾತ್ಮಕ ಪತ್ರ