ಬಾಲಿವುಡ್ ನಟ ಟೈಗರ್ ಶ್ರಾಫ್ ತಾಯಿಗೆ 58.53 ಲಕ್ಷ ವಂಚನೆ – ಕೇಸ್ ದಾಖಲು

Public TV
1 Min Read
Ayesha Shroff

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ತಾಯಿ ಆಯೇಷಾ ಶ್ರಾಫ್ (Ayesha Shroff) ಅವರಿಗೆ ತಮ್ಮ ಮಗನ ಸಂಸ್ಥೆಯಲ್ಲೇ ಸಿಬ್ಬಂದಿಯಾಗಿದ್ದ ಕಿಕ್ ಬಾಕ್ಸರ್ 58.53 ಲಕ್ಷ ರೂ. ವಂಚಿಸಿರುವುದಾಗಿ ಮುಂಬೈ ಪೊಲೀಸ್ (Mumbai Police) ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಆಯೇಷಾ ಶ್ರಾಫ್ ನೀಡಿದ ದೂರಿನ ಪ್ರಕಾರ, ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಫೈಟರ್ (Kickboxing Association) ಅಲನ್ ಫರ್ನಾಂಡಿಸ್ ಅವರನ್ನ ಟೈಗರ್ ಶ್ರಾಫ್ ಅವರ ಎಂಎಂಎ ಮ್ಯಾಟ್ರಿಕ್ಸ್ (MMA Matrix) ಕಂಪನಿಯ ಕಾರ್ಯಾಚರಣೆಯ ನಿರ್ದೇಶಕನನ್ನಾಗಿ ನೇಮಿಸಲಾಗಿತ್ತು.

Ayesha Shroff 2

ಕಂಪನಿಯು ಮಿಶ್ರ ಸಮರ ಕಲೆಗಳಲ್ಲಿ ತರಬೇತಿ ನೀಡುತ್ತದೆ. ಜೊತೆಗೆ ಕಂಪನಿಯ ಆಡಳಿತವನ್ನ ಆಯೇಷಾ ಶ್ರಾಫ್ ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್

ಅಲನ್ ಫೆರ್ನಾಂಡಿಸ್ ಅವರು 2018 ರಲ್ಲಿ ಎಂಎಂಎ ಮ್ಯಾಟ್ರಿಕ್ಸ್ ಸಂಸ್ಥೆಯಲ್ಲಿ ನಿರ್ದೇಶಕನಾಗಿ ನೇಮಕಗೊಂಡಿದ್ದ. ಅಲನ್ ಸಂಸ್ಥೆಯ ಮೂಲಕ ಭಾರತ ಮತ್ತು ವಿದೇಶಗಳಲ್ಲಿ 11 ಟೂರ್ನಿಗಳನ್ನ ಆಯೋಜಿಸಲು ಹಣ ಸಂಗ್ರಹಿಸಿ, ಅದರಲ್ಲಿ 58.53 ಲಕ್ಷ ರೂ.ಗಳನ್ನು ತನ್ನ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tiger Shroff 1

ಆಯೇಷಾ ಶ್ರಾಫ್ ಮೇ 3 ರಂದು ದೂರು ದಾಖಲಿಸಿದ್ದು, ನಂತರ ಫೆರ್ನಾಂಡಿಸ್ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ, ಕ್ರಿಮಿನಲ್ ಅಪರಾಧ, ನಂಬಿಕೆ ಉಲ್ಲಂಘನೆ ಹಾಗೂ ಇತರ ಅಪರಾಧಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಸಾಂತಾಕ್ರೂಜ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈನಿಂದ ಸ್ಯಾಂಡಲ್ ವುಡ್ ಗೆ ಬಂದ ಪ್ರಾಚಿ ಶರ್ಮಾ

Share This Article