ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೆಂಟ್‌ ಡೇಟ್ ಫಿಕ್ಸ್

Public TV
1 Min Read
varun tej 1

ಟಾಲಿವುಡ್‌ನ ಯಂಗ್ ಹೀರೋ, ಮೆಗಾಸ್ಟಾರ್ ಕುಟುಂಬದ (Megastar Family) ಮನೆ ಮಗ ವರುಣ್ ತೇಜ್ (Varun Tej) ಮದುವೆಗೆ (Wedding) ಸಕಲ ಸಿದ್ಧತೆ ನಡೆಯುತ್ತಿದೆ. ನಟಿ ಲಾವಣ್ಯ (Lavanya) ಜೊತೆಗೆ ವರುಣ್ ಮದುವೆ ಎಂಬ ಎಲ್ಲಾ ಊಹಾಪೋಹಗಳಿಗೂ ಸ್ಪಷ್ಟನೆ ಸಿಕ್ಕಿದೆ. ಬಹುಕಾಲದ ಗೆಳತಿ ನಟಿ ಲಾವಣ್ಯ ಜೊತೆ ಎಂಗೇಜ್ ಆಗಲು ವರುಣ್ ರೆಡಿಯಾಗಿದ್ದಾರೆ.

varun tej

ಚಿತ್ರರಂಗದಲ್ಲಿ ಮದುವೆಯ ಮಂಗಳ ವಾದ್ಯ ಸೌಂಡ್ ಮಾಡುತ್ತಿದೆ. ಅಥಿಯಾ ಶೆಟ್ಟಿ ಜೋಡಿ, ಸಿದ್- ಕಿಯಾರಾ, ಹೀಗೆ ಸ್ಟಾರ್ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ನಿಶ್ಚಿತಾರ್ಥಕ್ಕೆ (Engagement) ಕೌಂಟ್‌ಡೌನ್ ಶುರುವಾಗಿದೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್

varun tej 2

ನಟಿ ಲಾವಣ್ಯ ತ್ರಿಪಾಠಿ ಜೊತೆ ವರುಣ್ ತೇಜ್ ಕಳೆದ ಐದಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಗುರುಹಿರಿಯರು ಕೂಡ ಇಬ್ಬರ ಪ್ರೀತಿಗೆ ಸಮ್ಮತಿ ಸೂಚಿಸಿದ್ದಾರೆ. ಜೂನ್ 9ಕ್ಕೆ (June 9) ವರುಣ್- ಲಾವಣ್ಯ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್ ಆಗಿದೆ. ಹೈದರಾಬಾದ್‌ನಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಲಿದೆ.

varun tej

ಶ್ರೀಜಾ, ನಿಹಾರಿಕಾ ಕೊನಿಡೆಲಾ, ಡಿವೋರ್ಸ್ ಸಂಗತಿಯ ನಡುವೆ ವರುಣ್ ತೇಜ್ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ವರುಣ್- ಲಾವಣ್ಯ ಮದುವೆ ಕೂಡ ರಿವೀಲ್ ಆಗಲಿದೆ.

Share This Article