ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್‌

Public TV
1 Min Read
karnataka Congress Mlas Meeting

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government) ಸಂಪುಟ ವಿಸ್ತರಣೆಗೂ ಲೋಕಸಭಾ ಚುನಾವಣೆಗೂ (Lok Sabha Election) ಸಂಬಂಧ ಇದ್ಯಾ ಎಂಬ ಪ್ರಶ್ನೆ ಮೂಡಿದೆ. ಈಗ ಸಚಿವರಾದರೆ ಸಾಲದು ಲೋಕಸಭೆ ಚುನಾವಣೆಗೂ ಸಿದ್ದರಿರಬೇಕು ಎಂದು ಕನಿಷ್ಠ 10 ರಿಂದ 15 ಜನ ಸಚಿವರಿಗೆ ಈಗಲೇ ಬಿಗ್ ಟಾಸ್ಕ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಹಲವು ಶಾಸಕರು ಹೈಕಮಾಂಡ್ (High Command) ಬೆನ್ನು ಬಿದ್ದಿದ್ದಾರೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿ ಹೈಕಮಾಂಡ್ ಲೋಕಸಭೆಯ ದಾಳ ಉರುಳಿಸಲು ಮುಂದಾಗಿದೆ. ಲೋಕಸಭೆ ಗೆಲುವಿನ ಲೆಕ್ಕಾಚಾರ ಹಾಕಿಯೇ ಈ ಬಾರಿ ಸಚಿವ ಸ್ಥಾನದ ಅವಕಾಶ ನೀಡಲಾಗುತ್ತದೆ ಎಂಬುದು ಕಾಂಗ್ರೆಸ್ ವಲಯದ ಮಾತು.


2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25+1, ಕಾಂಗ್ರೆಸ್‌ 1, ಜೆಡಿಎಸ್‌ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದೆ. ಇದನ್ನೂ ಓದಿ: ನಮ್ಮ ಪೊಲೀಸರು ಯಾವತ್ತೂ ಕೇಸರೀಕರಣ ಮಾಡಿಲ್ಲ – ಸಿಎಂ, ಡಿಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

ಹೈಕಮಾಂಡ್‌ ಷರತ್ತು ಏನು?
ಈಗ ಯಾವ ಜಾತಿ? ಯಾವ ಜಿಲ್ಲೆ ಎನ್ನುವುದು ಮುಖ್ಯ ಅಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಸಾಮರ್ಥ್ಯ ಇರುವವರು ಎಷ್ಟು ಜನ ಎನ್ನುವುದೇ ಮಾನದಂಡ. ಅಗತ್ಯ ಬಿದ್ದರೆ ಅವರೇ ಅಖಾಡಕ್ಕಿಳಿದು ಗೆದ್ದು ತೋರಿಸಬೇಕು.

ಸಚಿವ ಸ್ಥಾನ ಕೇಳುವವರು ಲೋಕಸಭಾ ಟಾಸ್ಕ್ ಪಡೆಯಲೇಬೇಕು. ಯಾವ ಜಿಲ್ಲೆಯಲ್ಲಿ ಯಾವ ಪ್ರಭಾವಿ ಶಾಸಕನಿಗೆ ಸಚಿವಸ್ಥಾನ ಕೊಟ್ಟರೆ ಲೋಕಸಭೆಗೆ ನೆರವಾಗಲಿದೆ? ಯಾರನ್ನ ಮಂತ್ರಿ ಮಾಡಿದರೆ ಲೋಕಸಭೆಗೆ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅನುಕೂಲವಾಗಲಿದೆ? ಈ ಲೆಕ್ಕಾಚಾರದ ಮೇಲೆ 10-15 ಮಂತ್ರಿಸ್ಥಾನ ನಿರ್ಧಾರವಾಗಲಿದೆ ಎಂಬ ವಿಚಾರ ಈಗ ಲಭ್ಯವಾಗಿದೆ.

Share This Article