ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

Public TV
1 Min Read
SREELEEA

ನ್ನಡದ ‘ಕಿಸ್’ (Kiss Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಭರ್ಜರಿ ಅವಕಾಶ ಬಾಚಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಬಳಿಕ ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ತೆಲುಗಿನಲ್ಲಿ ಸದ್ದು ಮಾಡ್ತಿದ್ದಾರೆ.

sreeleela

ಕನ್ನಡದ ಕಿಸ್, ಭರಾಟೆ, ಬೈ 2 ಲವ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶ್ರೀಲೀಲಾ ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಎಂಟ್ರಿ ಕೊಟ್ರು. ನಂತರ ರವಿತೇಜಾಗೆ ‘ಧಮಾಕ’ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಈಗ ಟಾಲಿವುಡ್‌ನ 9 ಸಿನಿಮಾಗಳಲ್ಲಿ ಕಿಸ್ ಬ್ಯೂಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

sreeleela

ಎಂಬಿಬಿಎಸ್‌ (MBBS) ಓದುತ್ತಿರೋ ಶ್ರೀಲೀಲಾ, ಏಜುಕೇಷನ್ ಜೊತೆ ನಟನೆ ಕೂಡ ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗಾದ್ರೆ ಶ್ರೀಲೀಲಾ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ. ಇಲ್ಲಿದೆ ಮಾಹಿತಿ. ಮಹೇಶ್ ಬಾಬು ಸಿನಿಮಾ, ನಂದಮೂರಿ ಬಾಲಕೃಷ್ಣ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ನಟನೆಯ ‘ಉಸ್ತಾತ್ ಭಗತ್ ಸಿಂಗ್’, ನಿತಿನ್ ಹೊಸ ಸಿನಿಮಾ, ನವೀನ್ ಪೊಲಿಸೆಟ್ಟಿ ಸಿನಿಮಾ, ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ (ಕನ್ನಡ & ತೆಲುಗು), ಪಂಜ ವೈಷ್ಣವ್ ತೇಜ್ ಅವರ ‘ಆದಿಕೇಶವ’ ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಡ ಸೇರಿ ಒಟ್ಟು 9 ಸಿನಿಮಾಗಳಲ್ಲಿ ಶ್ರೀಲೀಲಾ ಲಿಸ್ಟ್‌ನಲ್ಲಿದೆ.

sreeleela

ತನ್ನ ಮುದ್ದು ಮುಖ, ಅದ್ಭುತ ನಟನೆ ಮೂಲಕ ಮೋಡಿ ಮಾಡ್ತಿರುವ ಶ್ರೀಲೀಲಾ ಅವರು ಸ್ಟಾರ್ ನಟಿಯಾಗಿ ನಿಲೋದ್ರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಕನ್ನಡದ ನಟಿಮಣಿಯರು ದಕ್ಷಿಣದ ಸಿನಿಮಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಅನುಷ್ಕಾ ಶೆಟ್ಟಿ, ಪ್ರಣೀತಾ ಸುಭಾಷ್, ರಶ್ಮಿಕಾ ಮಂದಣ್ಣ, ನಿತ್ಯಾ ಮೆನನ್ ಸೇರಿದಂತೆ ಹಲವರು ಸೈ ಎನಿಸಿಕೊಂಡಿದ್ದಾರೆ. ಇದೀಗ ಅದೇ ದಾರಿಯಲ್ಲಿ ಶ್ರೀಲೀಲಾ ಕೂಡ ಹೆಜ್ಜೆ ಇಡ್ತಿದ್ದಾರೆ.

Share This Article