Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಂದೆಗೆ ಮಗ ಡಾಕ್ಟರ್‌ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ತಂದೆಗೆ ಮಗ ಡಾಕ್ಟರ್‌ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ

Public TV
Last updated: May 20, 2023 2:13 pm
Public TV
Share
7 Min Read
siddaramaiah politics
SHARE

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಗಾಥೆಯೆಂದರೆ ಕೇವಲ ಸ್ವಂತ ಪರಿಶ್ರಮದಿಂದ ಯಶಸ್ಸಿನ ಎತ್ತರಕ್ಕೆ ಏರಿದ ಈ ನಾಡಿನ ಸಾಮಾನ್ಯ ಮನುಷ್ಯರ ಬದುಕಿನ ಕತೆ. ಸಿದ್ದರಾಮಯ್ಯನವರು ಹುಟ್ಟಿದ್ದು ಈ ನಾಡಿನ ಸಾವಿರಾರು ಹಳ್ಳಿಗಳಲ್ಲೊಂದಾದ ಕುಗ್ರಾಮದಲ್ಲಿ. ಹೆತ್ತವರೇನು ಶಿಕ್ಷಿತರಲ್ಲ, ಪ್ರಭಾವಿಗಳಲ್ಲ. ಅವರದ್ದು ಸಾಮಾನ್ಯ ರೈತ ಕುಟುಂಬ. ಹಳ್ಳಿಗಾಡಿನ ಬದುಕಿನ ಎಲ್ಲ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಸಿದ್ದರಾಮಯ್ಯನವರ ಬಾಳದಾರಿ ಇಂತಹದ್ದೇ ಹಿನ್ನೆಲೆಯಿಂದ ಬಂದವರಿಗೆ ಮಾರ್ಗದರ್ಶನ ಮಾತ್ರವಲ್ಲ ಸ್ಪೂರ್ತಿಯೂ ಹೌದು.

ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ಜಿಲ್ಲೆ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮ, ಜನನ 1948ರ ಆಗಸ್ಟ್ 12. ಇವರದ್ದು ಕೃಷಿ ಪ್ರಧಾನ ಕುಟುಂಬ. ಆಗಿನ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ ಪಾಸು ಮಾಡುವುದೇ ಕಠಿಣವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರಾದರು. ಭಾಷಣ ಮಾಡುವುದರಲ್ಲಿ ಸಿದ್ದರಾಮಯ್ಯ ಅವರದ್ದು ಎತ್ತಿದ ಕೈ. ಶಾಲಾ-ಕಾಲೇಜು ದಿನಗಳಲ್ಲಿ ಉತ್ತಮ ಭಾಷಣಕಾರರಾಗಿ ಹೊರಹೊಮ್ಮುವ ಮೂಲಕ ಸಿದ್ದರಾಮಯ್ಯ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದನ್ನೂ ಓದಿ: ಹಳ್ಳಿಗಾಡಿನ ಜೀವನ, ದನ ಕಾಯುತ್ತಿದ್ದ ಹುಡುಗನಿಂದ ಮುಖ್ಯಮಂತ್ರಿ ಗಾದಿವರೆಗೆ; ಸಿದ್ದರಾಮಯ್ಯ ಸಾಗಿಬಂದ ಹಾದಿ..

siddaramaiah old photo

ಸಿದ್ದರಾಮಯ್ಯ ಅವರು ಬಾಲ್ಯದ ದಿನಗಳನ್ನು ಕಳೆದದ್ದು ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲೇ. ಮಗನನ್ನು ಶಾಲೆಗೆ ಸೇರಿಸುವುದು ಬೇಡವೆಂದು ನಿರ್ಧರಿಸಿದ್ದ ಸಿದ್ದರಾಮಯ್ಯ ಅವರ ತಂದೆ ದನ ಮೇಯಿಸೋಕೆ ಕಳುಹಿಸುತ್ತಿದ್ದರು. ಶಾಲೆ ಬಿಟ್ಟು ದನ ಮೇಯಿಸುವ ಕಾಯಕಕ್ಕೆ ಮುಂದಾಗಬೇಕಾಯಿತು. ಆದರೆ ಬಾಲಕ ಸಿದ್ದರಾಮಯ್ಯ ಅವರಲ್ಲಿನ ಪ್ರತಿಭೆಯನ್ನು ಗಮನಿಸಿದ ಗ್ರಾಮದ ಶಾಲೆಯ ಶಿಕ್ಷಕರು ಶಾಲೆಗೆ ಕರೆತಂದು ನೇರವಾಗಿ 4ನೇ ತರಗತಿಗೆ ಪ್ರವೇಶ ಕೊಟ್ಟರು. ಬಾಲಕ ಆಗಿದ್ದಾಗ ತಾವು ದನ ಮೇಯಿಸಲು ಹೋಗುತ್ತಿದ್ದ ಸಂದರ್ಭವನ್ನು ಸಿದ್ದರಾಮಯ್ಯ ಅವರು ಆಗಾಗ ನೆನಪು ಮಾಡಿಕೊಳ್ಳುವುದುಂಟು.

ಪ್ರಾಥಮಿಕ ಶಿಕ್ಷಣದ ಬಳಿಕ ಸಿದ್ದರಾಮಯ್ಯ ಅವರು ಮುಖ ಮಾಡಿದ್ದು, ಮೈಸೂರಿನ ಕಡೆಗೆ. ಕಾಲೇಜು ಶಿಕ್ಷಣಕ್ಕಾಗಿ ಯುವರಾಜ ಕಾಲೇಜಿಗೆ ಪ್ರವೇಶ ಪಡೆದ ಸಿದ್ದರಾಮಯ್ಯ ಅವರು ಅಲ್ಲಿಯೇ ಬಿಎಸ್ಸಿ ಪದವಿ ಪಡೆದರು. “ನನ್ನನ್ನು ಡಾಕ್ಟರ್‌ ಮಾಡಬೇಕೆಂಬುದು ಅಪ್ಪನ ಯೋಚನೆಯಾಗಿತ್ತು. ಕಾರಣಾಂತರಗಳಿಂದ ನಾನು ವಕೀಲ ವೃತ್ತಿ ಆಯ್ದುಕೊಂಡೆ” ಎಂದು ಸಿದ್ದರಾಮಯ್ಯನವರು ಹಳೆಯ ನೆನಪನ್ನು ಮೆಲುಕು ಹಾಕುತ್ತಾರೆ. ಅಪ್ಪನ ಬಯಕೆಯ ಹೊರತಾಗಿಯೂ ಸಿದ್ದರಾಮಯ್ಯನವರು ಕಾನೂನು ವ್ಯಾಸಂಗಕ್ಕೆ ಮುಂದಾದರು. ಕಾನೂನು ಪದವಿಗಾಗಿ ಶಾರದಾ ವಿಲಾಸ ಕಾಲೇಜಿಗೆ ಸೇರಿದರು. ಅದರ ನಂತರ ಕೆಲಕಾಲ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಇದಾದ ನಂತರ ವಕೀಲ ವೃತ್ತಿಯನ್ನು ಆರಂಭಿಸಿದರು. ಇದನ್ನೂ ಓದಿ: ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ

siddaramaiah politics photo

ನ್ಯಾಯವಾದಿಯಾಗಿ ಸಿದ್ದರಾಮಯ್ಯ ಅವರ ಮನಸ್ಸು ನ್ಯಾಯಾಲಯದಲ್ಲೇ ಕಳೆದು ಹೋಗಲಿಲ್ಲ. ಬಾಲ್ಯದಲ್ಲಿದ್ದಾಗ ಸ್ವತಃ ಶೋಷಣೆ, ತಾರತಮ್ಯ ಅನುಭವಿಸಿದ್ದರು. ಹೀಗಾಗಿ ಶೋಷಿತ ವರ್ಗಗಳ ಪರ ಅವರ ಮನ ಸದಾ ಮಿಡಿಯುತ್ತಿತ್ತು. ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿ ಆಗಿದ್ದಾಗ ಮೈಸೂರಿನ ಸುಬ್ಬರಾಯನ ಕೆರೆ ಬಳಿ ಇರುವ ಕಟ್ಟಡದಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಕಷ್ಟದ ದಿನಗಳನ್ನು ಎದುರಿಸಿದ ಕಾಲವದು. ಅಂದಿನ ಆ ಅನುಭವವೇ ಮುಖ್ಯಮಂತ್ರಿಯಾಗಿ ಬಡವರ ಪರವಾದ ಹಲವಾರು ಯೋಜನೆಗಳನ್ನು ಇಂದು ಜಾರಿಗೆ ತರಲು ಸಹಕಾರಿ ಆಯಿತು. ”ಬಡವರ ಕಷ್ಟ ಏನು ಎಂಬುದು ನನಗೆ ಗೊತ್ತು, ಅದನ್ನು ಸ್ವಂತ ಅನುಭವಿಸಿದವನು ನಾನು. ಆದ್ದರಿಂದಲೇ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮತ್ತಿತರ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೇನೆ” ಎಂದು ಸಿದ್ದರಾಮಯ್ಯ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಪ್ರೊ. ಪಿ.ಎಂ ಚಿಕ್ಕಬೋರಯ್ಯ ಎಂಬವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಕ್ರಮೇಣ ಸಾರ್ವಜನಿಕ ಜೀವನಕ್ಕೆ ತೆರೆದುಕೊಂಡರು. ನಾಯಕತ್ವದ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳತೊಡಗಿದರು. ಇದನ್ನೂ ಓದಿ: ಸಿದ್ದು-ಡಿಕೆ ಪಟ್ಟಾಭಿಷೇಕಕ್ಕೆ ತಾರಾ ಮೆರುಗು

ಶೋಷಿತ ವರ್ಗಗಳ ಕಷ್ಟ ಕಾರ್ಪಣ್ಯಗಳಿಗಾಗಿ ಸದಾ ಮಿಡಿಯುತ್ತಿದ್ದ ಸಿದ್ದರಾಮಯ್ಯನವರಲ್ಲಿ ಸಾಮಾಜಿಕ ನ್ಯಾಯದ ಆಶಯ ಸೈದ್ಧಾಂತಿಕವಾಗಿ ಸ್ಪಷ್ಟಗೊಳ್ಳಲು ಕಾರಣವಾದುದು ಡಾ. ರಾಮಮನೋಹರ ಲೋಹಿಯಾ ಚಿಂತನೆ. ಇದಕ್ಕಾಗಿ ಅವರು ವಕೀಲ ವೃತ್ತಿಯನ್ನು ಬಿಟ್ಟು ರಾಜಕಾರಣಕ್ಕೆ ಧುಮುಕಿದರು. ಹೀಗೆ ವಕೀಲ ವೃತ್ತಿಯನ್ನು ಬಿಟ್ಟು ಬಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಮುಂದೆ ಸಾಗಿದರು. 1978ರಲ್ಲಿ ರಾಜಕಾರಣದಲ್ಲಿ ಅಧಿಕೃತವಾಗಿ ಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಜೊತೆ ಜೊತೆಗೆ ರೈತ ಚಳವಳಿಯತ್ತ ಆಕರ್ಷಿತರಾದರು. ಹೀಗಾಗಿ ಅವರಿಗೆ ಪ್ರೊ. ಎಂ.ಡಿ ನಂಜುಂಡ ಸ್ವಾಮಿ ಅವರ ಒಡನಾಟ ಲಭಿಸಿತು.

siddaramaiah photo

1980ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಆದರೆ ಹುಟ್ಟು ಛಲಗಾರ ಆ ಸೋಲಿನಿಂದ ಹಿಮ್ಮೆಟ್ಟಲಿಲ್ಲ. ಮೊದಲ ಸೋಲನ್ನೇ ಗೆಲುವಿನ ಸೋಪಾನ ಮಾಡಿಕೊಂಡ ಸಿದ್ದರಾಮಯ್ಯನವರು 1983ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರು. ತಕ್ಕಡಿ ಗುರುತಿನೊಂದಿಗೆ ಕಣಕ್ಕಿಳಿದಿದ್ದ ಸಿದ್ದರಾಮಯ್ಯನವರು ಇಂದಿರಾ ಕಾಂಗ್ರೆಸ್‌ನ ಡಿ. ಜಯದೇವರಾಜ ಅರಸು ಅವರನ್ನು ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. ಇದರಲ್ಲಿ ಮೈಸೂರು ತಾಲ್ಲೂಕಿನ ಮುಖಂಡರಾಗಿದ್ದ ಕೆಂಪವೀರಯ್ಯ ಎಂಬವರ ಪಾತ್ರ ಪ್ರಮುಖವಾಗಿತ್ತು.

ಒಂದಲ್ಲ, ಎರಡಲ್ಲ.. 4 ಬಾರಿ ಸೋಲು
ಸಿದ್ದರಾಮಯ್ಯ ಅವರು ವಿಧಾನಸಭೆಗೆ ಪ್ರವೇಶ ಪಡೆದಾಗ ಶ್ರೀರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಇತ್ತು. ಸರ್ಕಾರ ರಚನೆಗೆ ಹೆಗಡೆ ಅವರು ಪಕ್ಷೇತರರು ಹಾಗೂ ಬಿಜೆಪಿ ಸದಸ್ಯ ಬೆಂಬಲ ಪಡೆದಿದ್ದರು. ಸಿದ್ದರಾಮಯ್ಯ ಅವರೂ ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಯಿತು. ಬಳಿಕ ರೇಷ್ಮೆ ಸಚಿವರಾದರು. 1985ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದಾಗ ಸಿದ್ದರಾಮಯ್ಯ ಅವರು ಜನತಾ ಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾದರು. ಬಳಿಕ ಪಶು ಸಂಗೋಪನೆ, ರೇಷ್ಮೆ ಸಚಿವರಾದರು. ಎಸ್.ಆರ್ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಗಿ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಸಿದ್ದರಾಮಯ್ಯ ಅವರು ಆಗ ಜನತಾದಳದೊಂದಿಗೆ ಗುರುತಿಸಿಕೊಂಡರು. ಆದರೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹೊಂದಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಅದು ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ತುಸು ಹಿನ್ನಡೆಯ ಕಾಲ. ಇದನ್ನೂ ಓದಿ: ಉದ್ಯಮಿ ಆಗುವ ಕನಸು ಕಂಡಿದ್ದ ಡಿಕೆಶಿ ಡಿಸಿಎಂ ಆಗಿದ್ದು ಹೇಗೆ..?

ಅಹಿಂದಾ ಸಂಘಟನೆ ಕಟ್ಟಲು ಹೋಗಿ ಜೆಡಿಎಸ್‌ನಿಂದ ಉಚ್ಛಾಟನೆ
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರನ್ನು ಸೇರಿಸಿ ಅಹಿಂದಾ ಸಂಘಟನೆ ಮಾಡಲು ಆರಂಭಿಸಿದರು. ಆ ಕಾಲದಲ್ಲೇ ಹುಬ್ಬಳ್ಳಿಯಲ್ಲಿ 2-3 ಲಕ್ಷ ಜನ ಸೇರಿಸಿ ಬೃಹತ್‌ ಸಮಾವೇಶ ಆಯೋಜಿಸಿದ್ದರು. ಆ ಸಮಾವೇಶ ಮಾಡದಂತೆ ಸಿದ್ದುಗೆ ಹೆಚ್‌.ಡಿ.ದೇವೇಗೌಡರು ಸೂಚಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಸಮಾವೇಶ ಮಾಡಲು ಕಟಿಬದ್ಧರಾಗಿದ್ದರು. ಆಗ ಹೆಚ್‌.ಡಿ.ದೇವೇಗೌಡರು ಜೆಡಿಎಸ್‌ನಿಂದ ಸಿದ್ದರಾಮಯ್ಯ ಅವರನ್ನು ಉಚ್ಚಾಟಿಸಿದರು. ಡಿಸಿಎಂ ಸ್ಥಾನದಿಂದಲೂ ತೆಗೆದು ಹಾಕಿದರು. ಆಗಿನಿಂದ ಸಿದ್ದರಾಮಯ್ಯ ಅವರು ಅಹಿಂದಾ ಸಂಘಟನೆ ಕಟ್ಟಿ ಬೆಳೆಸಲು ಪ್ರಾರಂಭಿಸಿದರು.

siddaramaiah h.d.devegowda

ಸೋನಿಯಾಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆ
ಜೆಡಿಎಸ್‌ನಿಂದ ಉಚ್ಚಾಟನೆಯಾದ ಸಿದ್ದರಾಮಯ್ಯ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 2006ರ ಜುಲೈ 22ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಬೆಳವಣಿಗೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಬಳಿಕ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರೋಚಕ ಗೆಲುವು ಸಾಧಿಸಿದರು. 2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಆಯಿತು. ಆಗ ವರುಣಾ ಕ್ಷೇತ್ರ ಹೊಸದಾಗಿ ರಚನೆ ಆಯಿತು. ಆ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರು ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬಳ್ಳಾರಿಯ ಗಣಿಧಣಿಗಳ ವಿರುದ್ಧ ರಣಕಹಳೆ ಮೊಳಗಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ರಾಜ್ಯ ರಾಜಕೀಯದಲ್ಲಿ ಹೊಸಸಂಚಲವನ್ನೇ ಉಂಟುಮಾಡಿದರು.

2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಮಾತ್ರ ಶ್ರಮಿಸದೆ ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾದರು. 2013ರ ಮೇ 13 ರಂದು ಈ ನಾಡಿನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ನವರ ಮುಂದೆ ಹಲವಾರು ಸವಾಲುಗಳಿದ್ದವು. ಅವರೇ ಹೇಳಿಕೊಂಡಿರುವಂತೆ ಕರ್ನಾಟಕದಲ್ಲಿ ಕೋಮು ಸೌಹಾರ್ದತೆಯ ವಾತಾವರಣ ಕಲುಷಿತವಾಗಿತ್ತು. ಆರ್ಥಿಕ ಶಿಸ್ತಿಗೆ ಬದ್ಧವಾಗಿದ್ದ ಕರ್ನಾಟಕದಲ್ಲಿ ವಿತ್ತೀಯ ಶಿಸ್ತು ಅಪಾಯದ ಅಂಚಿನಲ್ಲಿತ್ತು. ದಕ್ಷ ಆಡಳಿತಕ್ಕೆ ಹೆಸರಾಗಿದ್ದ ಕರ್ನಾಟಕದ ಖ್ಯಾತಿ ಮಸುಕಾಗುತ್ತಿತ್ತು. ರಾಜ್ಯದ ಸ್ಥಿರ ರಾಜಕೀಯ ಅಸ್ಥಿರತೆಯ ಅಂಚಿಗೆ ಬಂದು ನಿಂತಿತ್ತು. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು ಈ ಸವಾಲುಗಳನ್ನು ದಿಟ್ಟತನದಿಂದಲೇ ಸ್ವೀಕರಿಸಿದರು. ತಮ್ಮ ಸುದೀರ್ಘ ರಾಜಕೀಯದ ಅನುಭವಗಳನ್ನು ಅಡಿಗಲ್ಲನ್ನಾಗಿಟ್ಟುಕೊಂಡು ಕರ್ನಾಟಕದ ಅಭಿವೃದ್ಧಿ ಸೌಧ ನಿರ್ಮಿಸಲು ಸಂಕಲ್ಪ ತೊಟ್ಟರು. ಪ್ರಮಾಣವಚನ ಸ್ವೀಕರಿಸಿದ ಮರುಘಳಿಗೆಯಲ್ಲಿಯೇ ರಾಜ್ಯದ ಶಕ್ತಿ ವಿಧಾನಸೌಧದ ಮೂರನೇ ಮಹಡಿಯ ಸಚಿವ ಸಂಪುಟ ಸಭಾಂಗಣಕ್ಕೆ ಎದೆಯುಬ್ಬಿಸಿ ನಡೆದರು. ನಾಡಿನ ಜನತೆಯ ಒಳಿತನ್ನೇ ಉಸಿರಾಗಿಸಿಕೊಂಡಿದ್ದ ತಮ್ಮ ಮಾತೃ ಹೃದಯದಿಂದ ಬಡ ಜನತೆಯ ಮೇಲೆ ಮಮತೆಯ ಮಹಾಪೂರವನ್ನೇ ಹರಿಸಿದರು. ಬಡಜನರ ಸಂಕಷ್ಟ ನಿವಾರಿಸುವ ದಿಟ್ಟ ನಿರ್ಧಾರಗಳನ್ನು ಪ್ರಕಟಿಸಿದರು. ನಾಡಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕಸಚಿವ ಸಂಪುಟ ಸಭೆ ನಡೆಸಿ ಅನ್ನಭಾಗ್ಯ, ಕ್ಷೀರಧಾರೆ, ಋಣಮುಕ್ತ, ವಸತಿ ಭಾಗ್ಯ …. ಇತ್ಯಾದಿ ಜನಪರ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದರು. ಇದನ್ನೂ ಓದಿ: ನುಗ್ಗೆಕಾಯಿ, ಅವರೆಕಾಳು ಸಾರು, ರೇಷ್ಮೆ ಬಟ್ಟೆ, ಪುನೀತ್‌ ಸಿನಿಮಾ ಅಂದ್ರೆ ಡಿಕೆಶಿಗೆ ಪ್ರಾಣ

siddaramaiah dharam singh

ಸಿದ್ದರಾಮಯ್ಯನವರ ಈ ದಿಟ್ಟ ನಡೆಯನ್ನು ನೋಡಿ ನಾಡಿನ ಜನತೆ ಹುಬ್ಬೇರಿಸಿತು. ಕೆಲವರು ಕುಹಕವಾಡಿದರು. ಇಂತಹ ಜನಾನುರಾಗಿ ಯೋಜನೆಗಳ ಮೂಲಕ ಇವರು ಬೊಕ್ಕಸವನ್ನೇ ಬರಿದುಗೊಳಿಸುತ್ತಾರೆ ಎಂದರು. ಆದರೆ ಸಿದ್ದರಾಮಯ್ಯನವರು ಈ ಕುಹಕದ ಮಾತುಗಳಿಂದ ಎದೆಗುಂದಲಿಲ್ಲ. ತಮ್ಮ ನುಡಿಗಳನ್ನು ನಡೆಯಲ್ಲಿ ತೋರಿಸಿದರು. ನುಡಿದಂತೆ ನಡೆದಿದ್ದೇವೆ ಎನ್ನುವ ಘೋಷವಾಕ್ಯವನ್ನೇ ರಚಿಸಿ ಅದರಂತೆ ನಡೆದರು.

Share This Article
Facebook Whatsapp Whatsapp Telegram
Previous Article MALLIKARJUN KHARGE ಮೋದಿ ಜಪಾನ್‍ಗೆ ಹೋಗುವ ಮೊದಲು ನೋಟ್ ಬ್ಯಾನ್, ಜನರಿಗೆ ತೊಂದ್ರೆ: ಖರ್ಗೆ ಕಿಡಿ
Next Article SIDDARAMAIAH BUDGET ಕುರಿ ಲೆಕ್ಕ ಹಾಕಲು ಬಾರದವನಿಗೆ ಹಣಕಾಸು ಖಾತೆ ಯಾಕೆ ಎಂದಿದ್ದವರಿಗೆ 13 ಬಜೆಟ್‌ ಮಂಡಿಸಿ ಠಕ್ಕರ್‌ ಕೊಟ್ಟ ‘ಟಗರು’!

Latest Cinema News

varsha bollamma
‘ಮಹಾನ್’ ಟೀಮ್ ಸೇರಿಕೊಂಡ ಖ್ಯಾತ ನಟಿ ವರ್ಷ ಬೊಳ್ಳಮ್ಮ
Cinema Latest Sandalwood Top Stories
Kantara 1 1
ಕಾಂತಾರ-1 ಪ್ರಚಾರಕ್ಕೆ ಸಾಥ್ ಕೊಟ್ಟ ಸೂಪರ್‌ಸ್ಟಾರ್ಸ್‌
Cinema Latest Sandalwood Top Stories Uncategorized
Mufti Police Teaser
ಅರ್ಜುನ್ ಸರ್ಜಾ ನಟನೆಯ ಮಫ್ತಿ ಪೊಲೀಸ್ ಸಿನಿಮಾದ ಟೀಸರ್ ರಿಲೀಸ್
Cinema Latest Top Stories
Jr NTR
ಶೂಟಿಂಗ್ ವೇಳೆ ಅವಘಡ – ಜೂ.ಎನ್‍ಟಿಆರ್‌ಗೆ ಗಾಯ
Cinema Latest South cinema Top Stories
Disha Patani 1
ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ – ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ ಪೊಲೀಸರು
Bollywood Cinema Crime Latest National Top Stories

You Might Also Like

Indrali railway overbridge
Latest

ಉಡುಪಿ: ಉಕ್ಕಿನ ರೈಲ್ವೇ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧ

11 minutes ago
Pandit Venkatesh Kumar
Bengaluru City

ಪಂ.ಕೆ.ವೆಂಕಟೇಶ್ ಕುಮಾರ್‌ಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ: ಶಿವರಾಜ ತಂಗಡಗಿ

37 minutes ago
Tirupati temple 2
Belgaum

ಬೆಳಗಾವಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಅನುಮೋದನೆ

45 minutes ago
nandini products KMF 1
Bengaluru City

ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ

45 minutes ago
vachanananda swamiji 3
Dharwad

ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಸಮೀಕ್ಷೆ ಮುಂದೂಡಬೇಕು: ವಚನಾನಂದ ಸ್ವಾಮೀಜಿ

50 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?