ಹಣಕಾಸು ಸಿಗದಿದ್ದರೂ ಡಿಕೆಗೆ ಸಿಕ್ತು 2 ಪ್ರಬಲ ಖಾತೆ

Public TV
1 Min Read
DKShivakumar 1

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಹಣಕಾಸು ಖಾತೆಯನ್ನು ನೀಡಬೇಕೆಂದು ಹೈಕಮಾಂಡ್‌ ಬಳಿ ಬೇಡಿಕೆ ಇಟ್ಟಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಸಿದ್ದರಾಮಯ್ಯನವರಿಗೆ (Siddaramaiah) ಸಿಎಂ ಹುದ್ದೆ ಸಿಕ್ಕಿದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್‌ ತನಗೆ ಹಣಕಾಸು ಖಾತೆಯನ್ನು (Ministry of Finance) ನೀಡುವಂತೆ ಹೈಕಮಾಂಡ್‌ ಬಳಿ ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇನ್ನು ಕೆಲವೇ ತಿಂಗಳಲ್ಲಿ ರಾಜಕೀಯ ಬದಲಾವಣೆ ಆಗಲಿದೆ: ಹೆಚ್‌ಡಿಕೆ ಭವಿಷ್ಯ

ಬೇರೆ ಯಾವುದೇ ಖಾತೆಯನ್ನು ಬೇಕಾದರೆ ಕೊಡಿ. ಆದರೆ ಹಣಕಾಸು ಖಾತೆಯನ್ನು ನಾನೇ ಇಟ್ಟುಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಡಿಕೆಶಿಗೆ ಎರಡು ಪ್ರಬಲ ಖಾತೆಯನ್ನು ಹೈಕಮಾಂಡ್‌ ನೀಡಿದೆ. ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?

ಮೂಲಗಳ ಪ್ರಕಾರ ಡಿಕೆಶಿಗೆ ಬೆಂಗಳೂರು ಅಭಿವೃದ್ಧಿ ಹಾಗೂ ಜಲಸಂಪನ್ಮೂಲ ಖಾತೆಯನ್ನು ನೀಡಲು ಹೈಕಮಾಂಡ್‌ ಅನುಮತಿ ನೀಡಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಡಿಕೆಶಿ ಇಂಧನ ಖಾತೆಯನ್ನು ಹೊಂದಿದ್ದರೆ ಎಂಬಿ ಪಾಟೀಲ್‌ ಜಲಸಂಪನ್ಮೂಲ ಖಾತೆಯ ಸಚಿವರಾಗಿದ್ದರು.

Share This Article