ಸರ್‌.. ಭಯ ಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ: ಸೋತು ಮಂಕಾಗಿದ್ದ ಸಿ.ಟಿ.ರವಿ ಸಂತೈಸಿದ ಬಾಲಕ

Public TV
1 Min Read
c.t.ravi boy

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಯಲ್ಲಿ ಆಪ್ತನ ಎದುರೇ ಸೋಲನುಭವಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿಗೆ (C.T.Ravi) ಪುಟ್ಟ ಬಾಲಕ ಸಾಂತ್ವನ ಹೇಳುತ್ತಿರುವ ದೃಶ್ಯದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸೋತು ಮಂಕಾಗಿ ಕುಳಿತಿದ್ದ ಸಿ.ಟಿ.ರವಿಗೆ “ಸರ್…. ನಿಮ್ಮ ಜೊತೆ ನಾವಿರ್ತೇವೆ. ನಾವು ಬಿಜೆಪಿ ಜೊತೆ ಇರ್ತೇವಿ, ನೀವು ಭಯ ಪಡಬೇಡಿ” ಎಂದು ಬಾಲಕ ಸಂತೈಸಿದ್ದಾನೆ. ಕೊನೆಯಲ್ಲಿ ಬಾಲಕ “ಜೈ ಹಿಂದ್‌” ಅಂತ ಹೇಳುತ್ತಾನೆ. ಸಿ.ಟಿ.ರವಿ ಕೂಡ ಬಾಲಕನಿಗೆ ಪ್ರತಿಯಾಗಿ “ಜೈ ಹಿಂದ್‌” ಎಂದು ಹೇಳುತ್ತಾರೆ. ಇದನ್ನೂ ಓದಿ: ನನಗೆ ಅಧಿಕಾರದ ಆಸೆಯಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

C.T.RAVI

ಚಿಕ್ಕಮಗಳೂರು ಕ್ಷೇತ್ರದಲ್ಲಿ 20 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದರು. ಪರಾಭವದಿಂದಾಗಿ ಬೇಸರಗೊಂಡು ಮನೆಯಲ್ಲೇ ಇದ್ದರು. ಈ ವೇಳೆ ಬಾಲಕ ಸಿ.ಟಿ.ರವಿ ಅವರನ್ನು ಸಮಾಧಾನಪಡಿಸಿದ್ದಾನೆ.

ಸಿ.ಟಿ.ರವಿ ಆಪ್ತರೇ ಆಗಿದ್ದ ತಮ್ಮಯ್ಯ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಸಿ.ಟಿ.ರವಿ ಮಣಿಸಲು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ತಮ್ಮಯ್ಯಗೆ ಟಿಕೆಟ್‌ ನೀಡಿತ್ತು. ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

Share This Article