ಸುಧಾಮೂರ್ತಿ ಎದುರೇ ಕಪಿಲ್ ಶರ್ಮಾಗೆ ಮುತ್ತಿಟ್ಟ ರವೀನಾ ಟಂಡನ್

Public TV
1 Min Read
kapil show

ಸಾಮಾನ್ಯವಾಗಿ ಟಿವಿ ಶೋ ಮತ್ತು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಕಾಣಿಸಿಕೊಳ್ಳುವುದಿಲ್ಲ. ಸಾಹಿತ್ಯದ ಕಾರ್ಯಕ್ರಮಗಳ ಹೊರತಾಗಿ ಮನರಂಜನಾ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲು ಇಚ್ಚಿಸುವುದೂ ಇಲ್ಲ. ಆದರೆ, ಹಿಂದಿಯ ಸುಪ್ರಸಿದ್ಧ ರಿಯಾಲಿಟಿ ಶೋ ಕಪಿಲ್ ಶರ್ಮಾ ಶೋನಲ್ಲಿ (The Kapil Sharma Show) ಅವರು ಭಾಗಿಯಾಗಿದ್ದಾರೆ. ಆ ಪ್ರೋಮೋವನ್ನು ವಾಹಿನಿಯೇ ರಿಲೀಸ್ ಮಾಡಿದೆ.

kapil show 1 2

ಸುಧಾ ಮೂರ್ತಿ ಅವರ ಜೊತೆಗೆ ಬಾಲಿವುಡ್ ನ ಖ್ಯಾತ ನಟಿ, ಕೆಜಿಎಫ್ 2 ಚಿತ್ರದ ರಮೀಕಾ ಶೇನ್  ಹಾಗೂ ಆಸ್ಕರ್ ಪ್ರಶಸ್ತಿ ವಿಜೇತೆ ನಿರ್ಮಾಪಕಿ ಗುನೀತ್ ಮೋಂಗಾ (Guneet Monga) ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರವೀನಾ ಟಂಡನ್ (Raveena Tandon) ಸಡನ್ನಾಗಿ ಎದ್ದು ಕಪಿಲ್ ಶರ್ಮಾಗೆ ಮುತ್ತು (Kiss) ಕೊಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಯಾದಲ್ಲಿ ಭಾರೀ ವೈರಲ್ ಆಗಿದೆ.

kapil show 1 1

ಕಪಿಲ್ ಶರ್ಮಾ ಮತ್ತು ರವೀನಾ ಟಂಡನ್ ಇಬ್ಬರೂ ಆತ್ಮೀಯ ಸ್ನೇಹಿತರು. ಎಷ್ಟೋ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಕಪಿಲ್ ಶರ್ಮಾ ಶೋನಲ್ಲಿ ರವೀನ್ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಸಲುಗೆಯೇ ಮುತ್ತಿನವರೆಗೂ ಎಳೆದುಕೊಂಡು ಹೋಗಿದೆಯಷ್ಟೇ. ಇದರಾಚೆ ಯಾವುದೇ ಗಾಸಿಪ್ ಗಳು ಇಲ್ಲ ಎಂದಿದ್ದಾರೆ ರವೀನಾ ಅಭಿಮಾನಿಗಳು. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

kapil show 1 3

ಈ ಶೋ ಯಾವಾಗಿಂದ ಪ್ರಸಾರವಾಗಲಿದೆ ಎನ್ನುವ ಮಾಹಿತಿಯನ್ನು ವಾಹಿನಿ ನೀಡದೇ ಇದ್ದರೂ, ಕಪಿಲ್ ಶರ್ಮಾಗೆ ರವೀನಾ ಮುತ್ತಿಡುವ ಪ್ರೋಮೋ ರಿಲೀಸ್ ಮಾಡಿ ಕುತೂಹಲ ಮೂಡಿಸಿದೆ. ರವೀನಾಗೆ ಕಪಿಲ್ ಕಾಲೆಳೆಯುವ ದೃಶ್ಯವಂತೂ ಸಖತ್ ಮಜವಾಗಿದೆ. ಅಲ್ಲದೇ, ನಿರೀಕ್ಷೆಯನ್ನೂ ಹುಟ್ಟಿಸಿದೆ.

Share This Article