ಗುಟ್ಕಾ ಪ್ಯಾಕೆಟ್ ಮುಖಾಂತರ ವ್ಯಾಪಾರಿಗೆ 32 ಲಕ್ಷ ಮೌಲ್ಯದ ವಜ್ರ ವಂಚಿಸಲು ಯತ್ನಿಸಿದ!

Public TV
1 Min Read
DAIMOND

ಗಾಂಧಿನಗರ: ವ್ಯಕ್ತಿಯೊಬ್ಬ 32 ಲಕ್ಷ ಮೌಲ್ಯದ ವಜ್ರವನ್ನು ಗುಟ್ಕಾ ಪ್ಯಾಕೆಟ್ (Gutka Packet) ಮುಖಾಂತರ ವಂಚಿಸಲು ಯತ್ನಿಸಿದ ಘಟನೆ ಗುಜರಾತಿ (Gujrat) ನ ಸೂರತ್‍ನಲ್ಲಿ ನಡೆದಿದೆ.

ಮೋಸ ಹೋದ ವ್ಯಾಪಾರಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ರಹೀಲ್ ಮಂಜನಿ ಎಂದು ಗುರುತಿಸಲಾಗಿದೆ. ಈತ ವಜ್ರದ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದನು.

ARREST

ವ್ಯಾಪಾರಿ ನಿಡಿದ ದೂರಿನಲ್ಲೇನಿದೆ..?: ಮಂಜನಿ ತನ್ನ ಕಚೇರಿಯಿಂದ 32,04,442 ರೂ. ಮೌಲ್ಯದ ಪಾಲಿಶ್ ಮಾಡಿದ, ದುಂಡಗಿನ ಮತ್ತು ನೈಸರ್ಗಿಕ ಗುಣಮಟ್ಟದ ವಜ್ರ (Diamond) ಗಳನ್ನು ಬೇರೆ ವ್ಯಾಪಾರಿಗೆ ಮಾರಾಟ ಮಾಡುವ ನೆಪದಲ್ಲಿ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ. ಅಲ್ಲದೆ 2023ರ ಫೆಬ್ರವರಿ 13ರಿಂದ 21ರ ನಡುವೆ ಮೂರು ಸೀಲ್ ಮಾಡಿದ ಪಾರ್ಸೆಲ್‍ಗಳಲ್ಲಿ ವಜ್ರಗಳನ್ನು ಸಂಗ್ರಹಿಸಿ, ಮುಂಚಿತವಾಗಿ 2 ಲಕ್ಷವನ್ನು ವೋರಾಗೆ ನೀಡಿದ್ದಾನೆ. ಉಳಿದ ಹಣವನ್ನು ಮೂರ್ನಾಲ್ಕು ದಿನಗಳಲ್ಲಿ ನೀಡುವುದಾಗಿ ಆರೋಪಿ ಹೇಳಿದ್ದಾನೆ.

ಇತ್ತ ಹಣ ಪಾವತಿ ಮಾಡದಿದ್ದಾಗ, ವೋರಾ ಅವರ ಪಾರ್ಸೆಲ್‍ಗಳನ್ನು ಕೇಳಿದರು ಮತ್ತು ಬ್ರೋಕರ್ ಮುಂದೆ ಮೂರು ಸೀಲ್ ಮಾಡಿದ ಪಾರ್ಸೆಲ್‍ಗಳನ್ನು ತೆರೆದರು. ಈ ವೇಳೆ ವಜ್ರಗಳ ಬದಲಿಗೆ ಪಾರ್ಸೆಲ್‍ಗಳಲ್ಲಿ ಗುಟ್ಕಾ, ತಂಬಾಕು ಜಗಿಯುವ ಪ್ಯಾಕೆಟ್‍ಗಳನ್ನು ಕಂಡು ಆಘಾತಕ್ಕೊಳಗಾಗಿದ್ದೇನೆ ಎಂದು ವ್ಯಾಪಾರಿ ರುಷಭ್ ವೋರಾ ಅವರು ಮಹಿಧರಪಾರಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Money

ಬ್ರೋಕರ್ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಜ್ರದ ಬದಲು ಗುಟ್ಕಾವನ್ನು ನೀಡಿ ವಂಚಿಸಲು ಮತ್ತೊಬ್ಬ ವಜ್ರದ ವ್ಯಾಪಾರಿಯೊಂದಿಗೆ ಸಂಚು ಹೂಡಿದ್ದಾನೆ ಎಂದು ವೋರಾ ಆರೋಪಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ

ಸದ್ಯ ವ್ಯಾಪಾರಿ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 420 (ವಂಚನೆ) ಮತ್ತು 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತರ ವ್ಯಾಪಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article