ಭಾರತೀಯ ಚಿತ್ರರಂಗದಲ್ಲಿ ಹೊಸ ಹೈಪ್ ಕ್ರಿಯೇಟ್ ಮಾಡಿದ ‘ಪುಷ್ಪ’ (Pushpa) ಸಿನಿಮಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಹಾಗಾಗಿ ಸಹಜವಾಗಿ ಪುಷ್ಪ 2 (Pushpa) ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅಲ್ಲು ಅರ್ಜುನ್ (Allu Arjun) , ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ನಟನೆಯ ಈ ಸಿನಿಮಾಗೆ ಹೊಸ ನಟಿಯ ಆಗಮನವಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ‘ಪುಷ್ಪ’ 2 ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.
ಶ್ರೀಜಾ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ ದಾಂಪತ್ಯದಲ್ಲಿ ಬಿರುಕಾಗಿದೆ. ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ (Divorce) ಬ್ರೇಕ್ ಬಿದ್ದ ಮೇಲೆ ಸಿನಿಮಾಗಳತ್ತ ಮುಖ ಮಾಡಿರುವ ನಟಿ ನಿಹಾರಿಕಾ ಅವರು ಅಲ್ಲು ಅರ್ಜುನ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್
‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್‌ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.