ಲಕ್ನೋ: ತನ್ನ ಯೂಟ್ಯೂಬ್ ಚಾನೆಲ್‌ಗೆ ವೀಡಿಯೋ ಮಾಡುವ ಸಲುವಾಗಿ 300 ಕಿಮೀ ವೇಗದಲ್ಲಿ ಬೈಕ್ (SuperBike) ಚಲಿಸುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿ ಯೂಟ್ಯೂಬರ್ (YouTuber) ಸಾನ್ನಪ್ಪಿರುವ ಘಟನೆ ಉತ್ತರಪ್ರದೇಶದ (UttarPradesh) ಯಮುನಾ ಎಕ್ಸ್‌ಪ್ರೆಸ್‌ವೇ ನಲ್ಲಿ ನಡೆದಿದೆ.
ಯೂಟ್ಯೂಬರ್ ಅಗಸ್ತೆ ಚೌಹಾಣ್ ಕವಾಸಕಿ ನಿಂಜಾ ZX10R – 1,000CC ಸೂಪರ್ ಬೈಕ್ ನಲ್ಲಿ ಆಗ್ರಾದಿಂದ ದೆಹಲಿಗೆ ಬರುತ್ತಿದ್ದ ವೇಳೆ ತನ್ನ ಚಾನೆಲ್‌ಗಾಗಿ ವೀಡಿಯೋ ಮಾಡುತ್ತಿದ್ದನು. ಅದಕ್ಕಾಗಿ 300 ಕಿಮೀ ವೇಗದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದಾನೆ. ಸ್ನೇಹಿತರು ಸಾವಿನ ಸುದ್ದಿ ಕೇಳಿ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಇಬ್ಬರು ಯೋಧರು ಸಾವು
ಮೂಲಗಳ ಪ್ರಕಾರ, ಯೂಟ್ಯೂಬರ್ ಬೈಕ್ ನಿಯಂತ್ರಣ ತಪ್ಪಿ ಯಮುನಾ ಎಕ್ಸ್‌ಪ್ರೆಸ್‌ವೇ ಡಿವೈಡರ್‌ಗೆ ಡಿಕ್ಕಿ ಹೊಡೆದ್ದಾನೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೆಟ್ ತುಂಡುತುಂಡಾಗಿದೆ, ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಲಿಘರ್‌ನ ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ 47 ಮೈಲ್ ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ
ಅಗಸ್ತೆ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿದ್ದು, ʻಪ್ರೊ ರೈಡರ್ 1000ʼ ಎಂಬ ಶೀರ್ಷಿಕೆಯ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಸುಮಾರು 12 ಲಕ್ಷ ಚಂದಾದಾರರನ್ನ ಹೊಂದಿದ್ದ. ತಾನು ದೆಹಲಿಗೆ ಹೋಗುತ್ತಿರುವುದಾಗಿ ತನ್ನ ಚಾನೆಲ್‌ಗೆ ಕೊನೆಯ ವೀಡಿಯೋ ಅಪ್ಲೋಡ್ ಮಾಡಿದ್ದ. ದೆಹಲಿಗೆ ಮತ್ತೆ ಮರಳುವಾಗ ನಾನು 300 ಕಿಮೀ ವೇಗದಲ್ಲಿ ಬೈಕ್ ಓಡಿಸುವುದನ್ನ ತೋರಿಸುತ್ತೇನೆ ಎಂದು ಹೇಳಿದ್ದ. ಅದಕ್ಕಾಗಿ ವೀಡಿಯೋ ಮಾಡಲು ಹೋಗಿ ಬೈಕ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಟ್ಯೂಬರ್ ಸಾವಿನ ಸುದ್ದಿ ಕೇಳಿದ ನೆಟ್ಟಿಗರು ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್ ವೇಗಳಲ್ಲಿ ಬೈಕ್ ಓಡಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಬೈಕ್ ಸ್ಟಂಟ್ ಮಾಡುವುದು, ಅತೀ ವೇಗವಾಗಿ ಚಲಿಸುವುದು ಹಾಗೂ ಬೈಕ್ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುವುದನ್ನು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.