ನವದೆಹಲಿ: ಈ ಬಾರಿಯ ಏಪ್ರಿಲ್ ತಿಂಗಳಿನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ (GST) ಸಂಗ್ರಹವಾಗಿದ್ದು, ದೇಶದಲ್ಲಿ ಜಾರಿಯಾದ ಬಳಿಕ ಇದೇ ಮೊದಲಬಾರಿಗೆ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ (Ministry of Finance) ಸೋಮವಾರ ತಿಳಿಸಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆ ನಂತರ ಕಳೆದ ಅಕ್ಟೋಬರ್‌ನಲ್ಲಿ 1.48 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, 2ನೇ ಬಾರಿಗೆ ಅತಿಹೆಚ್ಚು ಸಂಗ್ರಹವಾದ ಜಿಎಸ್‌ಟಿ ಪ್ರಮಾಣವಾಗಿತ್ತು. ಆದ್ರೆ 2023ರ ಕಳೆದ ಏಪ್ರಿಲ್ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಹಿಂದೆಂಗಿತಲೂ ಅತ್ಯಧಿಕ 19,495 ಕೋಟಿ ರೂ. ಅಂದ್ರೆ ಶೇ.12 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಅಂತ್ಯಕ್ರಿಯೆಗೆ GST ಸುಳ್ಳೆಂದ ಕೇಂದ್ರ ಸರ್ಕಾರ- ತೆರಿಗೆ ವಾಪಸ್‍ಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ
ಕಳೆದ ತಿಂಗಳು ಏಪ್ರಿಲ್ 20 ರಂದು ಒಂದೇ ದಿನದಲ್ಲಿ 68,228 ಕೋಟಿ ರೂ. ಸಂಗ್ರಹವಾಗಿದೆ. ಇದು ಈವರೆಗೆ ಒಂದೇ ದಿನದಲ್ಲಿ ಸಂಗ್ರಹವಾದ ಅತಿಹೆಚ್ಚು ಜಿಎಸ್‌ಟಿ ಪ್ರಮಾಣವಾಗಿದೆ. ಇದನ್ನೂ ಓದಿ: 2ನೇ ಬಾರಿಗೆ ದಾಖಲೆ GST ಸಂಗ್ರಹ – 1.52 ಲಕ್ಷ ಕೋಟಿಯಲ್ಲಿ ಯಾವ ರಾಜ್ಯದ ಪಾಲು ಎಷ್ಟು?
ರಾಜ್ಯದ ತೆರಿಗೆ ಶೇ.33 ರಷ್ಟು ಹೆಚ್ಚಳ: ಕರ್ನಾಟಕದಲ್ಲಿ (Karnataka) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.23 ರಷ್ಟು ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ. 14,593 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 11,820 ಕೋಟಿ ರೂ. ಸಂಗ್ರಹವಾಗಿತ್ತು. ಇದನ್ನೂ ಓದಿ: ಒಂದೇ ತಿಂಗಳಲ್ಲಿ 6,085 ಕೋಟಿ GST ಸಂಗ್ರಹ – ಸಿಎಂ ಬೊಮ್ಮಾಯಿ
ಇನ್ನೂ ರಾಜ್ಯಗಳ ಪೈಕಿ ಈ ಬಾರಿಯೂ ಮಹಾರಾಷ್ಟ್ರದಲ್ಲಿ (Maharashtra) ಅತ್ಯಂತ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ 27,495 ಕೋಟಿ ರೂ. ಸಂಗ್ರಹವಾಗಿದ್ದ ಮಹಾರಾಷ್ಟ್ರಕ್ಕೆ 33,196 ಕೋಟಿ ಜಿಎಸ್‌ಟಿ ಹರಿದುಬಂದಿದ್ದು, ಕಳೆದ ವರ್ಷಕ್ಕಿಂತ ಶೇ.21 ರಷ್ಟು ಹೆಚ್ಚಾಗಿದೆ. ಗುಜರಾತ್ (Gujarat) 11,721 ಕೋಟಿ ರೂ., ತಮಿಳುನಾಡು (Tamil Nadu) 11,559 ಕೋಟಿ ರೂ., ಪಶ್ಚಿಮ ಬಂಗಾಳ (West Bengal) 6,447 ಕೋಟಿ ರೂ., ಹರ್ಯಾಣ 10,035 ಕೋಟಿ ರೂ., ಉತ್ತರಪ್ರದೇಶ 10,320 ಕೋಟಿ ರೂ. ಹಾಗೂ ಹಾಗೂ ತೆಲಂಗಾಣ 5,622 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದೆ.