ಕ್ರಿಕೆಟ್ ಕನಸಿಗಾಗಿ ಪಾನಿ ಪುರಿ ಮಾರಾಟ ಮಾಡಿದ್ದೆ – ಜೈಸ್ವಾಲ್

Public TV
2 Min Read
JAISWAL

ಮುಂಬೈ: ಕ್ರಿಕೆಟ್ ಕನಸನ್ನು ನನಸಾಗಿಸಲು ರಸ್ತೆ ಬದಿಯಲ್ಲಿ ಪಾನಿ ಪುರಿ ಮಾರುತ್ತಿದ್ದೆ ಎಂದು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಹೇಳಿಕೊಂಡಿರುವ ಹಳೇಯ ಸುದ್ದಿ ಈಗ ವೈರಲ್ ಆಗಿದೆ.

ಭಾನುವಾರದ ಮುಂಬೈ ವಿರುದ್ಧದ ಐಪಿಎಲ್ (IPL) ಪಂದ್ಯದಲ್ಲಿ ಜೈಸ್ವಾಲ್ 62 ಎಸೆತಗಳಿಗೆ 124 ರನ್ ಗಳಿಸಿದರು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‍ಮನ್ ಮತ್ತು ಮಾಜಿ ಹೈದರಾಬಾದ್ (Sunrisers Hyderabad) ತಂಡದ ಮಾಜಿ ಕೋಚ್ ಟಾಮ್ (Tom Moody) ವಿಶೇಷ ಪ್ರತಿಭೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

ಜೈಸ್ವಾಲ್ ಐಪಿಎಲ್‍ನಲ್ಲಿ ಗಳಿಸಿದ ಚೊಚ್ಚಲ ಶತಕವು ಪ್ರಸಕ್ತ ಋತುವಿನ ಅತ್ಯಧಿಕ ಸ್ಕೋರ್ ಮಾತ್ರವಲ್ಲದೆ ಒಟ್ಟು 9 ಪಂದ್ಯಗಳಿಂದ 428 ರನ್ ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ಸಿಕ್ಕಿದೆ.

ಜೈಸ್ವಾಲ್ ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಟೀಂ ಇಂಡಿಯಾ ಹಾಗೂ ರಾಜಸ್ಥಾನ ತಂಡಕ್ಕೆ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 213 ರನ್‍ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಹೊಡೆದು 6 ವಿಕೆಟ್‍ಗಳ ಜಯವನ್ನು ಸಾಧಿಸಿತು.

ಪಾನಿ ಪುರಿ ಕತೆ:
11 ವರ್ಷದವರಾಗಿದ್ದಾಗ ನಾನು ಹೆತ್ತವರಿಲ್ಲದೆ ಮುಂಬೈಗೆ (Mumbai) ತೆರಳಿದ್ದೆ. ಅಲ್ಲಿ ಚಿಕ್ಕಪ್ಪನ ಜೊತೆ ಗುಡಿಸಿಲಿನಲ್ಲಿ ವಾಸವಾಗಿದ್ದೆ. ನಂತರ ಬೇರೆ ಕಡೆ ತೆರಳಲು ಹೇಳಿದರು. ನಂತರ ಆಜಾದ್ ಮೈದಾನ (ಮುಂಬೈ ಕ್ರೀಡಾ ಮೈದಾನ) ಬಳಿಯ ಟೆಂಟ್‍ನಲ್ಲಿ ಉಳಿಯಲು ಪ್ರಾರಂಭಿಸಿದೆ. ಹಗಲಿನಲ್ಲಿ ಅಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಆಹಾರದ ಖರ್ಚಿಗಾಗಿ ರಾತ್ರಿ ವೇಳೆ ಪಾನಿ ಪುರಿ ಮಾರಾಟ ಮಾಡುತ್ತಿದ್ದೆ ಎಂದು ಜೈಸ್ವಾಲ್ 2020ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದನ್ನೂ ಓದಿ: ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

Share This Article